ಬೆಂಗಳೂರು: ಭಾರತೀಯ ಮುಕ್ತ ಹವಾಮಾನ ಈಜು (Open Water Swimming) ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಬೆಂಗಳೂರಿನ ದಂಪತಿ ಸಜ್ಜಾಗಿದ್ದಾರೆ. ಬೆಂಗಳೂರಿನ ದಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಎಂಬ ದಂಪತಿ ಶ್ರೀಲಂಕಾದಿಂದ ಭಾರತದವರೆಗೆ ಸಮುದ್ರದಲ್ಲಿ ಈಜುವ ಮೂಲಕ ಈ ಸಾಧನೆ ಮಾಡಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಐತಿಹಾಸಿಕ ರಾಮಸೇತು ಮಾರ್ಗದಲ್ಲಿ ಸುಮಾರು 32 ಕಿಲೋಮೀಟರ್ ದೂರವನ್ನು ಈ ದಂಪತಿ ಈಜಿ ಮುಗಿಸಿದ್ದಾರೆ.
ದಂಪತಿ ಒಟ್ಟಿಗೆ ಮುಕ್ತ ಸಮುದ್ರದಲ್ಲಿ ಈ ಐತಿಹಾಸಿಕ ಮಾರ್ಗವನ್ನು ಕ್ರಮಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಈ ರೋಮಾಂಚಕ ಸಾಹಸದ ಕುರಿತು ದಂಪತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟ್ರೈನಿಂಗ್ ಮುಗಿದಿದೆ, ಪ್ಯಾಕಿಂಗ್ ಆಗಿದೆ, ಟೈಟಾನ್ ಸೆಲೆಸ್ಟರ್ 2.0 (Titan Celestor 2.0) ವಾಚ್ ಧರಿಸಿ ಟ್ರ್ಯಾಕಿಂಗ್‌ಗೂ ಸಿದ್ಧವಾಗಿದ್ದೇವೆ. ಶ್ರೀಲಂಕಾದಿಂದ ಭಾರತದವರೆಗಿನ ಈಜಿನ ಸಾಹಸಕ್ಕೆ ನಾವೀಗ ಪೂರ್ತಿ ಸಿದ್ಧ ಎಂದು ಬರೆದುಕೊಂಡಿದ್ದಾರೆ.
10 ಗಂಟೆ 45 ನಿಮಿಷಗಳ ನಿರಂತರ ಹೋರಾಟ
ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿವರೆಗೆ ಈ ದಂಪತಿ ಈಜಿದ್ದಾರೆ. ಸಮುದ್ರದ ಕಠಿಣ ಪರಿಸ್ಥಿತಿಯ ನಡುವೆಯೂ ಕೇವಲ 10 ಗಂಟೆ 45 ನಿಮಿಷಗಳಲ್ಲಿ ಈ ಗುರಿಯನ್ನು ತಲುಪಿದ್ದಾರೆ.ನಾವು ಇದನ್ನು ಸಾಧಿಸಿದ್ದೇವೆ ಸಮುದ್ರದಲ್ಲಿ ಕಳೆದ ಆ ಸಮಯ ಅತ್ಯಂತ ಕಠಿಣವಾಗಿತ್ತು ಎಂದು ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಂತಸ ಹಂಚಿಕೊಂಡಿದ್ದಾರೆ
https://www.instagram.com/reel/DX6frJBTV-N/?igsh=dG1wbG9lMzd1ZGM3
ಸಾಂಸ್ಕೃತಿಕ ಸಂಬಂಧದ ಸಂದೇಶ
ಕೇವಲ ಕ್ರೀಡಾ ಸಾಧನೆಯಷ್ಟೇ ಅಲ್ಲದೆ, ಭಾರತ ಮತ್ತು ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧವನ್ನು ಸಾರುವ ಉದ್ದೇಶದಿಂದ ಈ ರಾಮಸೇತು ಮಾರ್ಗವನ್ನು ಆಯ್ದುಕೊಳ್ಳಲಾಗಿತ್ತು. ದಂಪತಿಯ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, “ನಿಮ್ಮ ಸಾಧನೆ ನಮಗೆ ಸ್ಫೂರ್ತಿ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ
ಮಣಿಪಾಲ್ ಆಸ್ಪತ್ರೆಗಳ ಬೆಂಬಲ: ಭಾರತದ ಪ್ರಮುಖ ಹೆಲ್ತ್‌ಕೇರ್ ನೆಟ್‌ವರ್ಕ್ ಆದ ‘ಮಣಿಪಾಲ್ ಹಾಸ್ಪಿಟಲ್ಸ್’ ಈ ಐತಿಹಾಸಿಕ ಸಾಹಸಕ್ಕೆ ಸಂಪೂರ್ಣ ವೈದ್ಯಕೀಯ ಮತ್ತು ತಾಂತ್ರಿಕ ಬೆಂಬಲವನ್ನು ನೀಡಿದೆ. ಇವರ ಸುರಕ್ಷತೆಗಾಗಿ ಕೋಸ್ಟ್ ಗಾರ್ಡ್ ಮತ್ತು ಪ್ಯಾರಾಮೆಡಿಕ್ಸ್ ತಂಡಗಳು ದೋಣಿಗಳ ಮೂಲಕ ಜೊತೆಗಿರಲಿವೆ.
ಆರೋಗ್ಯದ ಸಂದೇಶ: ಈಜು ಕಲಿಯಲು ವಯಸ್ಸಿನ ಮಿತಿ ಇಲ್ಲ, ಇದು ಬದುಕಿಗೆ ಅಗತ್ಯವಿರುವ ಒಂದು ಜೀವ ರಕ್ಷಕ ಕಲೆ ಎಂಬ ಫಿಟ್‌ನೆಸ್ ಮತ್ತು ಆರೋಗ್ಯದ ಸಂದೇಶವನ್ನು ಈ ದಂಪತಿ ಜಗತ್ತಿಗೆ ಸಾರುತ್ತಿದ್ದಾರೆ.
ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಕ್ರೀಡೆಯ ಮೂಲಕ ಮತ್ತಷ್ಟು ಗಟ್ಟಿಗೊಳಿಸಲು ಹೊರಟಿರುವ ಈ ಸಾಹಸಿ ದಂಪತಿಯ ಪ್ರಯತ್ನ ಯಶಸ್ವಿಯಾಗಲಿ ಎಂದು ಕರಾವಳಿ ಹಾಗೂ ದೇಶದ ಕ್ರೀಡಾಭಿಮಾನಿಗಳು ಹಾರೈಸುತ್ತಿದ್ದಾರೆ.

