HomeEntertainmentಹೊಸ ಅವತಾರದಲ್ಲಿ ಎನರ್ಜೆಟಿಕ್ ಸ್ಟಾರ್: ನಟ ರಾಮ್ ಪೋತಿನೇನಿ ಈಗ ಸಿನೆಮಾ ನಿರ್ದೇಶಕ!

ಹೊಸ ಅವತಾರದಲ್ಲಿ ಎನರ್ಜೆಟಿಕ್ ಸ್ಟಾರ್: ನಟ ರಾಮ್ ಪೋತಿನೇನಿ ಈಗ ಸಿನೆಮಾ ನಿರ್ದೇಶಕ!

ಟಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಾಮ್ ಪೋತಿನೇನಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಬಾರೀ ಸರ್ಪ್ರೈಸ್ ನೀಡಿದ್ದಾರೆ. ತಮ್ಮ 23ನೇ ಚಿತ್ರದ ಮೂಲಕ ರಾಮ್ ಕೇವಲ ನಟನಾಗಿ ಮಾತ್ರವಲ್ಲದೆ, ಮೊದಲ ಬಾರಿಗೆ ನಿರ್ದೇಶಕನಾಗಿಯೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಗೀತಸಾಹಿತಿ ಮತ್ತು ಗಾಯಕನಾಗಿ ಗುರುತಿಸಿಕೊಂಡಿದ್ದ ರಾಮ್, ಈಗ ಮೆಗಾಫೋನ್ ಹಿಡಿಯಲು ಸಜ್ಜಾಗಿರುವುದು ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಕಥೆ ‘RAPO23’ ಎಂದು ತಾತ್ಕಾಲಿಕವಾಗಿ ಹೆಸರಿಡಲಾದ ಈ ಚಿತ್ರವು ಸ್ಟೈಲಿಶ್ ಸೈಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿರಲಿದೆ. ತೆಲುಗು ಸಿನಿಮಾದಲ್ಲಿ ಇಂತಹ ಜಾನರ್ ಅಪರೂಪವಾಗಿದ್ದು, ರಾಮ್ ಪೋತಿನೇನಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ. ಈ ಮೂಲಕ ರಾಮ್ ಅವರು ಹಿರಿಯ ನಟರಾದ ಎನ್.ಟಿ.ಆರ್, ಕೃಷ್ಣ ಮತ್ತು ಪವನ್ ಕಲ್ಯಾಣ್ ಅವರಂತೆ ನಟನೆಯ ಜೊತೆಗೆ ನಿರ್ದೇಶನಕ್ಕೂ ಇಳಿದ ತಾರೆಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಚಿತ್ರವನ್ನು ರಾಪೋ ಸಿನೆಮ್ಯಾಟಿಕ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಪೋತಿನೇನಿ ನಿರ್ಮಿಸುತ್ತಿದ್ದಾರೆ.

ವೀರನಾಗಿ ರಾಮ್ ಮಾಸ್ ಲುಕ್ ಸಿನಿಮಾದ ಅಧಿಕೃತ ಪೋಸ್ಟರ್ ಮೂಲಕ ರಾಮ್ ಅವರ ‘ವೀರ’ ಎಂಬ ಪಾತ್ರವನ್ನು ಪರಿಚಯಿಸಲಾಗಿದೆ. ಪೋಸ್ಟರ್‌ನಲ್ಲಿ ರಾಮ್ ಲೆದರ್ ಜಾಕೆಟ್ ಮತ್ತು ಮಾಡರ್ನ್ ಹೇರ್‌ಸ್ಟೈಲ್‌ನೊಂದಿಗೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕೆಂಪು ಬಣ್ಣದ ‘V’ ಅಕ್ಷರವು ದ್ರೋಹ ಮತ್ತು ಅಪಾಯದ ಸಂಕೇತದಂತೆ ಭಾಸವಾಗುತ್ತಿದೆ. “ದಿ ಸ್ಟೋರಿ ಆಫ್ ಎ ಲೋನ್ ವುಲ್ಫ್” (The Story of a Lone Wolf) ಎಂಬ ಟ್ಯಾಗ್‌ಲೈನ್ ಸಿನಿಮಾವು ಒಬ್ಬ ವ್ಯಕ್ತಿಯ ಏಕಾಂಗಿ ಹೋರಾಟ ಮತ್ತು ಮಾನಸಿಕ ಸಂಘರ್ಷದ ಕಥೆ ಎಂಬುದನ್ನು ಸೂಚಿಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಾತ್ರಕ್ಕಾಗಿ ರಾಮ್ ಪೋತಿನೇನಿ ಅವರು ಶಾರೀರಿಕವಾಗಿ ದೊಡ್ಡ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಜೂನ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಸದ್ಯದಲ್ಲೇ ಚಿತ್ರದ ಇತರ ಕಲಾವಿದರು ಮತ್ತು ತಾಂತ್ರಿಕ ತಂಡದ ಬಗ್ಗೆ ಮಾಹಿತಿ ಹೊರಬೀಳಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular