HomeEntertainmentಹುಟ್ಟುಹಬ್ಬದಂದೇ ಸಿಕ್ಕಿತು ಬಿಗ್ ಆಫರ್: ನಟ ರಾಮ್ ಪೋತಿನೇನಿ ನಿರ್ದೇಶನದ ಸಿನಿಮಾಗೆ ಸಂಯುಕ್ತಾ ಮೇನನ್...

ಹುಟ್ಟುಹಬ್ಬದಂದೇ ಸಿಕ್ಕಿತು ಬಿಗ್ ಆಫರ್: ನಟ ರಾಮ್ ಪೋತಿನೇನಿ ನಿರ್ದೇಶನದ ಸಿನಿಮಾಗೆ ಸಂಯುಕ್ತಾ ಮೇನನ್ ಸೇರ್ಪಡೆ

ತೆಲುಗು ಚಿತ್ರರಂಗದ ಮಾಸ್ ಹಾಗೂ ಎನರ್ಜಿಟಿಕ್ ನಟ ರಾಮ್ ಪೋತಿನೇನಿ ಇದೀಗ ಬೆಳ್ಳಿಪರದೆಯ ಮೇಲೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟನೆಯ ಜೊತೆಗೆ ಪ್ರಥಮ ಬಾರಿಗೆ ಮೆಗಾಫೋನ್ ಹಿಡಿದು ನಿರ್ದೇಶಕರಾಗಿ ಬಡ್ತಿ ಪಡೆದಿರುವ ಅವರ ಚೊಚ್ಚಲ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸಂಯುಕ್ತಾ ಮೇನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ‘ರಾಪೋ ೨೩’ ಎಂದು ಹೆಸರಿಡಲಾಗಿರುವ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ಗೆ ಸಂಯುಕ್ತಾ ಆಯ್ಕೆಯಾಗಿರುವುದನ್ನು ಅವರ ಹುಟ್ಟುಹಬ್ಬದಂದೇ ಚಿತ್ರತಂಡ ಅಧಿಕೃತವಾಗಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಮಲಯಾಳಂ ಮೂಲದ ನಟಿ ಸಂಯುಕ್ತಾ ಮೇನನ್ ‘ತೀವಂಡಿ’, ‘ಲಿಲ್ಲಿ’ ಹಾಗೂ ‘ಕಡುವಾ’ ಮುಂತಾದ ಸೂಪರ್ ಹಿಟ್ ಚಿತ್ರಗಳ ಮೂಲಕ ತಮ್ಮ ಅಭಿನಯದ ಛಾಪು ಮೂಡಿಸಿದವರು. ತೆಲುಗು ಚಿತ್ರರಂಗದಲ್ಲಿ ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ಇವರು, ನಂತರ ನಟಿಸಿದ ‘ವಿರೂಪಾಕ್ಷ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ನೂರು ಕೋಟಿ ರೂಪಾಯಿ ಗಳಿಕೆ ಕಂಡು ಸಂಚಲನ ಸೃಷ್ಟಿಸಿತ್ತು. ಪ್ರಸ್ತುತ ಸಾಲುಸಾಲಾಗಿ ಸಿನಿಮಾಗಳಲ್ಲಿ ನಿರತರಾಗಿರುವ ಸಂಯುಕ್ತಾ, ಇತ್ತೀಚೆಗಷ್ಟೇ ಮಹಿಳೆಯರ ಸಬಲೀಕರಣ ಹಾಗೂ ಅಭಿವೃದ್ಧಿಗಾಗಿ ‘ಆದಿ ಶಕ್ತಿ’ ಎಂಬ ಹೆಸರಿನ ಸಮಾಜಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಸಂಪೂರ್ಣವಾಗಿ ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ರಾಮ್ ಪೋತಿನೇನಿ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಅವರೇ ‘ವೀರ’ ಎಂಬ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ರಾಪೋ ಸಿನೆಮ್ಯಾಟಿಕ್ಸ್ ಬ್ಯಾನರ್ ಅಡಿಯಲ್ಲಿ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಸಂಗೀತ ಸಂಯೋಜನೆ ಮಾಡುತ್ತಿದ್ದರೆ, ಪ್ರಸಿದ್ಧ ಛಾಯಾಗ್ರಾಹಕ ತಿರು ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ. ಪ್ರಸ್ತುತ ಪ್ರಿ-ಪ್ರೊಡಕ್ಷನ್ ಮತ್ತು ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular