HomeKarnatakaBREAKING NEWS: ರಾಜ್ಯಸಭಾ ಚುನಾವಣೆ: ಈವರೆಗೆ 102 ಶಾಸಕರಿಂದ ಮತದಾನ

BREAKING NEWS: ರಾಜ್ಯಸಭಾ ಚುನಾವಣೆ: ಈವರೆಗೆ 102 ಶಾಸಕರಿಂದ ಮತದಾನ

ಬೆಂಗಳೂರು: ರಾಜ್ಯಸಭಾ ಚುನಾವಣಾ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.

ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯುತ್ತಿದೆ. ಈವರೆಗೆ 102 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಆಪರೇಷನ್ ಕಮಲದ ಭೀತಿಯಿಂದ ರೆಸಾರ್ಟ್ ಗೆ ಶಿಫ್ಟ್ ಆಗಿದ್ದ ಕಾಂಗ್ರೆಸ್ ಶಾಸಕರು ಮೂರು ಬಸ್ ಗಳಲ್ಲಿ ಆಗಮಿಸಿದ್ದು, ವಿಧಾನಸೌಧ ಬಂದು ಮತದಾನ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಸಭಾ ಚುನಾವಣಾ ಮತದಾನ ಈವರೆಗೆ ಶಾಂತಿಯುತವಾಗಿ ನಡೆದಿದೆ. ಸಂಜೆ ವೇಳೆ ಫಲಿತಾಂಶ ಹೊರ ಬೀಳಲಿದೆ.

For Latest News Updates, Join Our Whatsapp Community🚩
RELATED ARTICLES

Most Popular