ಶತಕದ ಬಳಿಕ ಬಾಲ್ಯದ ಕೋಚ್‌ಗೆ ಕರೆ ಮಾಡಿದ ಕೊಹ್ಲಿ: ಭಾವುಕ ಕ್ಷಣದ ವಿಡಿಯೋ ವೈರಲ್‌ | Watch

ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ ನಂತರ, ಅವರ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಲೈವ್ ಸಂದರ್ಶನದಲ್ಲಿರುವಾಗಲೇ ವಿರಾಟ್ ಕೊಹ್ಲಿಯಿಂದ ಕರೆ ಬಂದ ಕಾರಣ ಸಂದರ್ಶನವನ್ನು ಸ್ಥಗಿತಗೊಳಿಸಿದ್ದಾರೆ. ರಾಜಕುಮಾರ್ ಶರ್ಮಾ ಲೈವ್ ಸಂದರ್ಶನದಲ್ಲಿರುವಾಗ ಅವರ ಫೋನ್ ರಿಂಗಣಿಸಿತು. ಪರದೆಯ ಮೇಲೆ ನೋಡಿದ ಅವರು, ʼಅವನ ಕರೆʼ ಎಂದು ಹೇಳಿದ್ದಾರೆ. ಅದು ವಿರಾಟ್ ಕೊಹ್ಲಿಯ ಕರೆ ಆಗಿತ್ತು. ಲೆಕ್ಕವಿಲ್ಲದಷ್ಟು ರನ್ ಮತ್ತು ಹಲವು ಸಾಧನೆಗಳ ನಂತರವೂ, ಕೊಹ್ಲಿ ದೊಡ್ಡ ಪಂದ್ಯದ ನಂತರ ತಮ್ಮ ಬಾಲ್ಯದ ಕೋಚ್‌ಗೆ ಕರೆ ಮಾಡಲು ಎಂದಿಗೂ ಮರೆಯುವುದಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮುಖಾಮುಖಿಗಿಂತ ದೊಡ್ಡ ಸಂದರ್ಭ ಇನ್ನೇನು ಇರಲು ಸಾಧ್ಯ ? ಈಗಾಗಲೇ ಸಂತೋಷದಿಂದದ್ದ ರಾಜಕುಮಾರ್ ಸಂದರ್ಶನವನ್ನು ನಿಲ್ಲಿಸಿ, ತಮ್ಮ ಶಿಷ್ಯನೊಂದಿಗೆ ಮಾತನಾಡಲು ಕ್ಯಾಮೆರಾದಿಂದ ದೂರ ಸರಿದಿದ್ದರು. ಈ ವಿಡಿಯೋ ಈಗ ವೈರಲ್‌ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read