HomeEntertainmentಸ್ನೇಹಿತ ನಿಧನ: ಕನ್ನಡದಲ್ಲಿ ಪೋಸ್ಟ್ ಹಾಕಿ ರಜನಿಕಾಂತ್ ಸಂತಾಪ

ಸ್ನೇಹಿತ ನಿಧನ: ಕನ್ನಡದಲ್ಲಿ ಪೋಸ್ಟ್ ಹಾಕಿ ರಜನಿಕಾಂತ್ ಸಂತಾಪ

ಕನ್ನಡಿಗ, ಸೂಪರ್ ಸ್ಟಾರ್ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದು ಅಪರೂಪ. ಆದರೆ ಈಗ ಅವರು ಕನ್ನಡದಲ್ಲಿಯೇ ಪೋಸ್ಟ್ ಹಾಕಿದ್ದು, ಮೈಸೂರಿನಲ್ಲಿ ನಿಧನ ಹೊಂದಿದ ಸ್ನೇಹಿತನ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.

ರಜನಿಕಾಂತ್ ಸ್ನೇಹಿತ 74 ವರ್ಷದ ಕೆ.ಜೆ.ಕುಮಾರ್ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತ್ರಕರ್ತರು ಆಗಿದ್ದ ಅವರು ಸಿನಿಮಾರಂಗದ ಹಲವು ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ರಜನಿಕಾಂತ್ ಪೋಸ್ಟ್: ರಜನಿಕಾಂತ್ ತಮ್ಮ ಪೋಸ್ಟ್‌ನಲ್ಲಿ ‘ದಿವಂಗತ ಕೆ.ಜೆ.ಕುಮಾರ್‌ರವರು ನನ್ನ ಆತ್ಮೀಯ ಸ್ನೇಹಿತರು. ಆರಂಭಕಾಲದಿಂದಲೂ ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರು’ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಬಹಳ ಸರಳವಾಗಿ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆಯಲ್ಲಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ’ ಎಂದು ರಜನಿಕಾಂತ್ ತಿಳಿಸಿದ್ದಾರೆ.

‘ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಹೇಳಿದ್ದಾರೆ.

ಕೆ.ಜೆ.ಕುಮಾರ್ ಯಾರು?: ಕೆ.ಜೆ.ಕುಮಾರ್ ಮೈಸೂರಿನಲ್ಲಿದ್ದರು. ಪತ್ರಕರ್ತರಾಗಿದ್ದರು. ಮೂಲತಃ ಅವರು ಉಡುಪಿ ಜಿಲ್ಲೆಯವರು. 1952ರ ನವೆಂಬರ್‌ 6ರಂದು ಜನಿಸಿದ್ದರು. ಸುಮಾರು 56 ವರ್ಷಗಳಿಂದ ಮೈಸೂರಿನ ಪ್ರಮುಖ ಪತ್ರಿಕಾ ವಿತರಕರಾಗಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.

1969ರಲ್ಲಿ ಸೋದರಮಾವ ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಸ್ವಾತಂತ್ರ ಹೋರಾಟಗಾರ ಎ. ರಾಮಣ್ಣ ಸಂಪಾದಕತ್ವದ ವಿಜಯ ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ್ದರು.

ಸಿನಿಮಾ ಪತ್ರಕರ್ತರಾಗಿ ಸುಧಾ, ವಿಜಯ ಚಿತ್ರ ಸಿನಿಮಾ ಮಾಸಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. 1978ರಿಂದ ರೂಪಾತಾರ ಸಿನಿಮಾ ಮಾಸ ಪತ್ರಿಕೆಗೆ ಮೂರೂ ದಶಕಗಳ ಕಾಲ ಕಾರ್ಯ ನಿರ್ವಹಣೆ ಮಾಡಿದ್ದರು.

ಕೆ.ಜೆ. ಕುಮಾರ್‌ ಚಿತ್ರರಂಗದಲ್ಲಿ ಡಾ.ರಾಜ್‌ ಕುಮಾರ್‌, ಡಾ. ವಿಷ್ಣುವರ್ಧನ್‌, ಅಂಬರೀಷ್‌, ರಜನಿ ಕಾಂತ್‌, ಶಶಿಕುಮಾರ್‌, ದ್ವಾರಕೀಶ್‌, ವೀರಸ್ವಾಮಿ, ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ, ಎಸ್‌‍.ವಿ. ರಾಜೇಂದ್ರ ಸಿಂಗ್‌ ಬಾಬು ಅವರೊಂದಿಗೆ ಆತೀಯ ಒಡನಾಟ ಹೊಂದಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular