ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನೆಮಾ ಭರ್ಜರಿ ಯಶಸ್ಸು ಕಂಡಿದ್ದು, ಇದರ ಬೆನ್ನಲ್ಲೇ ರಜನಿಕಾಂತ್ ಅವರ ಮತ್ತೊಂದು ಚಿತ್ರ ‘ತಲೈವಾ 170’ ನಿರ್ಮಾಣಕ್ಕೆ ಲೈಕಾ ಪ್ರೊಡಕ್ಷನ್ಸ್ ಮುಂದಾಗಿದೆ. ಈ ಘೋಷಣೆಯಿಂದ ಸಂತಸಗೊಂಡಿದ್ದ ರಜನಿ ಫ್ಯಾನ್ಸಿಗೆ ಈಗ ಮತ್ತೊಂದು ಥ್ರಿಲ್ಲಿಂಗ್ ಸುದ್ದಿ ಸಿಕ್ಕಿದೆ.
‘ತಲೈವಾ 170’ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಅಭಿನಯಸಲಿದ್ದಾರೆ ಎಂದು ಹೇಳಲಾಗಿದ್ದು, ಈ ಚಿತ್ರ ನಿರ್ಮಿಸುತ್ತಿರುವ ಲೈಕಾ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಇದನ್ನು ಖಚಿತಪಡಿಸಿದೆ. ಈ ಮೂಲಕ 32 ವರ್ಷಗಳ ಬಳಿಕ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಹಿರಿತೆರೆಯಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.
ಈ ಇಬ್ಬರು ಮಹಾನ್ ಕಲಾವಿದರು ಒಟ್ಟಿಗೆ ನಟಿಸುತ್ತಿರುವುದು ಉಭಯ ನಟರುಗಳ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಇದನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇವರಿಬ್ಬರ ಅಭಿನಯದ ‘ತಲೈವಾ 170’ ಸಿನಿಮಾ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ. ಈ ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://twitter.com/LycaProductions/status/1709168926884757794?ref_src=twsrc%5Etfw%7Ctwcamp%5Etweetembed%7Ctwterm%5E1709168926884757794%7Ctwgr%5Ed16b0f8f8a25fa8f75502c1a35eb61908fb80b66%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Frajinikanthamitabhbachchanreuniteinthalaivar170after32yearsfanssayrs1000crboloading-newsid-n543714112
https://twitter.com/ur_PRAVEE_for_u/status/1709169300739862958?ref_src=twsrc%5Etfw%7Ctwcamp%5Etweetembed%7Ctwterm%5E1709169300739862958%7Ctwgr%5Ed16b0f8f8a25fa8f75502c1a35eb61908fb80b66%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Frajinikanthamitabhbachchanreuniteinthalaivar170after32yearsfanssayrs1000crboloading-newsid-n543714112
https://twitter.com/VENKATE68684279/status/1709171411284103401?ref_src=twsrc%5Etfw%7Ctwcamp%5Etweetembed%7Ctwterm%5E1709
https://twitter.com/AVinthehousee/status/1709169659398991951?ref_src=twsrc%5Etfw%7Ctwcamp%5Etweetembed%7Ctwterm%5E1709169659398991951%7Ctwgr%5Ed16b0f8f8a25fa8f75502c1a35eb61908fb80b66%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Frajinikanthamitabhbachchanreuniteinthalaivar170after32yearsfanssayrs1000crboloading-newsid-n543714112