HomeLatest NewsBIG NEWS: ದೇಶವೇ ಬೆಚ್ಚಿ ಬೀಳುವ ಹೇಯ ಘಟನೆ: 13 ವರ್ಷದ ಬಾಲಕಿ ಮೇಲೆ 30...

BIG NEWS: ದೇಶವೇ ಬೆಚ್ಚಿ ಬೀಳುವ ಹೇಯ ಘಟನೆ: 13 ವರ್ಷದ ಬಾಲಕಿ ಮೇಲೆ 30 ಕಾಮುಕರಿಂದ ನಿರಂತರ 5 ದಿನ ಅತ್ಯಾಚಾರ

ಜೈಪುರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಪೈಶಾಚಿಕ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ ಮೇಲೆ 30 ಕಾಮುಕರು ನಿರಂತರವಾಗಿ 5 ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ನಡೆದಿದೆ.

ಹೋಟೆಲ್ ರೂಮ್ ನಲ್ಲಿ ಬಾಲಕಿಯನ್ನು ಕೂಡಿಹಾಕಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಬಾಲಕಿ ನೋವಿನಿಂದ ಚೀರಾಡುತ್ತಿದ್ದಂತೆ ಆಕೆಗೆ ಬಲವಂತವಾಗಿ ಮದ್ಯವನ್ನು ಕುಡಿಸಿ ಮೌನವಾಗಿಸುತ್ತಿದ್ದರು. ಆಕೆ ಮದ್ಯದ ನಶೆಯಲ್ಲಿರುವಾಗಲೇ ದುರುಳರು ಪದೇ ಪದೇಅತ್ಯಾಚಾರವೆಸಗುತ್ತಿದ್ದರು. ಈ ಹೇಯ ಕೃತ್ಯಕ್ಕೆ ಪೊಲೀಸರು ಕೂಡ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

13 ವರ್ಷದ ಬಾಲಕಿ ಜೂನ್ 14ರಂದು ತನ್ನ ಸ್ನೇಹಿತೆಯ ಮನೆಗೆ ಕಾರ್ಯಕ್ರಮಕ್ಕೆಂದು ಹೋಗಿ ಸಂಜೆ ಮನೆಗೆ ವಾಪಸ್ ಆಗುತ್ತಿದ್ದಳು. ಮನೆಗೆ ಬರುವಾಗ ಆಟೋದಲ್ಲಿ ಮನೆಯತ್ತ ಸಾಗಿದ್ದಳು. ಈ ವೇಳೆ ಆಟೋ ಚಾಲಕ ಬಾಲಕಿಯನ್ನು ಮನೆಗೆ ತಲುಪಿಸದೇ ಹೋಟೆಲ್ ಬಳಿ ಕರೆತಂದು ಬಾಲಕಿಯನ್ನು ಹೋಟೆಲ್ ಮಾಲೀಕನಿಗೆ ಮಾರಾಟ ಮಾಡಿ ಬಿಟ್ಟಿದ್ದಾನೆ. ಬಲಾಕಿ ಮನೆಗೆ ಬಾರದಿದ್ದಗ ಕಂಗಾಲಾದ ಪೋಲಿಸರು ಆಕೆಯ ಸ್ನೇಹಿತೆ ಮನೆಯನ್ನು ಹುಡುಕಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತ ಆಟೋ ಚಾಲಕ ಬಾಲಕಿಯನ್ನು ಹೋಟೆಲ್ ಮಾಲೀಕನಿಗೆ ಮಾರಟ ಮಾಡಿ ಹಣ ಪಡೆದು ಎಸ್ಕೇಪ್ ಆಗಿದ್ದಾನೆ. ಹೋಟೆಲ್ ರೂಮ್ ನಲ್ಲಿ ಕೂಡು ಹಾಕಿದ ಬಾಲಕಿಯ ಮೇಲೆ ೧೦ಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಅಟ್ಟಹಾಸ ಮೆರೆದಿದ್ದಾರೆ. ಪ್ರತಿದಿನ ಬೇರೆ ಬೇತೆ ಹೋಟೆಲ್ ಗಳಿಗೆ ಕರೆದೊಯ್ದು ೩೦ಕ್ಕೂ ಹೆಚ್ಚು ಜನರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಐದು ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಲಾಗಿದೆ.

ಬಾಲಕಿ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ತನ್ನ ಮೇಲೆ ಅತ್ಯಾಚಾರವೆಸಗಿದ ಹೋಟೆಲ್ ಮಾಲೀಕರು, ಎಲ್ಲರಿಗೂ ಕಥಿಣ ಶಿಕ್ಷೆಯಾಗಬೇಕು, ನನ್ನ ಮೇಲೆ ಕೃತ್ಯವೆಸಗಿದ ಎಲ್ಲರೂ ಸಿಕ್ಕಿ ಬೀಳುತ್ತಾರೆ. ಪೊಲೀಸರು ಕೂಡ ಸಿಕ್ಕಿ ಬೀಳಲಿದ್ದಾರೆ. ನನ್ನನ್ನು ಕೊಂದು ಹಾಕಲು ಅವರೆಲ್ಲರೂ ಯತ್ನಿಸಿದರು. ಪೊಲೀಸರು ಕೇಸ್ ದಾಖಲಿಸಲು ಹಿಂದೇಟು ಹಾಕಿದರು. ಯಾರನ್ನೂ ಬಿಡಬಾರದು ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಸಂತ್ರಸ್ತ ಬಾಲಕಿ ಕೂಗಾಡುತ್ತಾ ಕಣ್ಣೀರಿಡುತ್ತಿದ್ದಾಳೆ.

ಬಾಲಕಿ ಮೇಲಿನ ಅತ್ಯಾಚಾರಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜಸ್ಥಾನದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ರಾಜಸ್ಥಾನ ಸರ್ಕಾರ ಬಾಲಕಿ ಮೇಲೆ ಅತ್ಯಾಚಾರ ನಡೆದ ಹೋಟೆಲ್ ಗಳನ್ನು ಸಂಪೂರ್ಣ ಧ್ವಂಸಗೊಳಿಸಿದೆ. ಹಲವು ಹೋಟೆಲ್ ಗಳಲ್ಲಿ ಬಾಲಕಿ ಮೇಲೆ ಅಟ್ಟಹಾಸ ಮೆರೆಯಲಾಗಿದ್ದು, ಈ ಎಲ್ಲಾ ಹೋಟೆಲ್ ಗಳನ್ನು ನೆಲಸಮಗೊಳಿಸಲಗಿದೆ. ಪ್ರಕರಣ್ ಅಸಂಬಂಧ ಹೋಟೆಲ್ ಮಾಲಿಕರು, ಮ್ಯಾನೇಜರ್ ಗಳು ಸೇರಿ 14 ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಇನ್ನುಳಿದ ಕಾಮುಕರ ಬಂಧನಕ್ಕೆ ಎಸ್ ಐಟಿ ಬಲೆ ಬೀಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular