HomeEntertainmentಜುಲೈ 10ಕ್ಕೆ ರಿಲೀಸ್ ಆಗಲಿದೆ ರಾಜ ವರ್ಧನ್ ಅಭಿನಯದ 'ಹಿರಣ್ಯ' ಚಿತ್ರದ ಟ್ರೈಲರ್

ಜುಲೈ 10ಕ್ಕೆ ರಿಲೀಸ್ ಆಗಲಿದೆ ರಾಜ ವರ್ಧನ್ ಅಭಿನಯದ ‘ಹಿರಣ್ಯ’ ಚಿತ್ರದ ಟ್ರೈಲರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ರಾಜ ವರ್ಧನ್ ನಟನೆಯ ‘ಹಿರಣ್ಯ’ ಇದೇ ಜುಲೈ 19ಕ್ಕೆ ತೆರೆ ಕಾಣಲಿದ್ದು ಇದರ ಟ್ರೈಲರ್ ಜುಲೈ 10 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿದೆ. ಈ ಕುರಿತು ರಾಜವರ್ಧನ್ ತಮ್ಮ  instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಪ್ರವೀಣ್ ಅಯುಕ್ತ್ ನಿರ್ದೇಶನದ ಈ ಚಿತ್ರವನ್ನು ವೇದಾಸ್ ಇನ್ಫಿನಿಟ್ ಪಿಚ್ಚರ್ ಬ್ಯಾನರ್ ನಡಿ  ವಿಘ್ನೇಶ್ವರ ಗೌಡ ಹಾಗೂ ಜೈ ಗೌಡ ವಿಜಯ್ ಗೌಡ ಬಿದರಹಳ್ಳಿ ನಿರ್ಮಾಣ ಮಾಡಿದ್ದು, ರಾಜ ವರ್ಧನ್ ಸೇರಿದಂತೆ ರಿಹಾನಾ, ದಿವ್ಯಾ ಸುರೇಶ್, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ, ಗಿರೀಶ್  ತೆರೆ ಹಂಚಿಕೊಂಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್  ಸಂಕಲನ, ಯೋಗೇಶ್ವರನ್ ಆರ್  ಛಾಯಾಗ್ರಹಣ,   ಮದನ್ ಹರಿಣಿ, ಮುರಳಿ  ನೃತ್ಯ ನಿರ್ದೇಶನ ಹಾಗೂ ವಿನೋದ್ ಮತ್ತು ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular