ಸುರಕ್ಷತಾ ವಿಭಾಗದ 1.77 ಲಕ್ಷ ಸೇರಿ ರೈಲ್ವೇ ಇಲಾಖೆಯಲ್ಲಿ 2.74 ಲಕ್ಷ ಹುದ್ದೆ ಖಾಲಿ

ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಜೂನ್ 2023 ರ ಹೊತ್ತಿಗೆ ಖಾಲಿಯಾಗಿವೆ, ಅವುಗಳಲ್ಲಿ 1.7 ಲಕ್ಷಕ್ಕೂ ಹೆಚ್ಚು ಸುರಕ್ಷತಾ ವರ್ಗದಲ್ಲಿವೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್.ಟಿ.ಐ.ನಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈಲ್ವೇ 1 ಹಂತ ಸೇರಿದಂತೆ ಗ್ರೂಪ್ ಸಿಯಲ್ಲಿ 2,74,580 ಹುದ್ದೆಗಳು ಖಾಲಿ ಇವೆ. ಸುರಕ್ಷತಾ ವಿಭಾಗದಲ್ಲಿ ಒಟ್ಟು 1,77,924 ಹುದ್ದೆಗಳು ಖಾಲಿ ಇವೆ ಎಂದು ಹೇಳಿದೆ.

01.06.2023 (ತಾತ್ಕಾಲಿಕ)ನಂತೆ ಭಾರತೀಯ ರೈಲ್ವೆಯಲ್ಲಿ ಗ್ರೂಪ್-ಸಿ(ಲೆವೆಲ್-1 ಸೇರಿದಂತೆ) ಖಾಲಿ ಇರುವ ಒಟ್ಟು ನಾನ್-ಗೆಜೆಟೆಡ್ ಹುದ್ದೆಗಳ ಸಂಖ್ಯೆ 2,74,580 ಎಂದು ಸಚಿವಾಲಯ ತಿಳಿಸಿದೆ.

01.06.2023 ರಂತೆ ಈ ಕಛೇರಿಯಲ್ಲಿ ಲಭ್ಯವಿರುವಂತೆ(ತಾತ್ಕಾಲಿಕ) ಭಾರತೀಯ ರೈಲ್ವೇಯಲ್ಲಿ ಗ್ರೂಪ್-ಸಿ(ಲೆವೆಲ್-1 ಸೇರಿದಂತೆ) ಸುರಕ್ಷತಾ ವರ್ಗದಲ್ಲಿ ಮಂಜೂರಾದ, ರೋಲ್ ಮತ್ತು ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ ಕ್ರಮವಾಗಿ 9,82,037, 8,04,113 ಮತ್ತು 1,77,924 ಎಂದು RTI ಉತ್ತರ ಹೇಳಿದೆ.

ಡಿಸೆಂಬರ್ 2022 ರಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆಯಲ್ಲಿ 3.12 ಲಕ್ಷ ಗೆಜೆಟೆಡ್ ಅಲ್ಲದ ಹುದ್ದೆಗಳು ಖಾಲಿ ಇವೆ ಎಂದು ಸಂಸತ್ತಿಗೆ ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read