ರಾಯಚೂರು: ಇತ್ತೀಚಿನ ದಿನಗಳಲ್ಲಿ ಮಮತೆ-ವಾತ್ಸಲ್ಯ, ಸಂಬಂಧಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ಮನುಷತ್ವವನ್ನು ಕಳೆದುಕೊಂಡು ಮೃಗಗಳಂತೆ ವರ್ತಿಸುತ್ತಿದ್ದಾನೆ. ಇಲ್ಲೊಬ್ಬ ಮಗರಾಯ ಹೆತ್ತ ತಾಯಿಯನ್ನೇ ಕೊಲೆಗೈದಿರುವ ಘೋರ ಘಟನೆ ನಡೆದಿದೆ.
ಆಸ್ತಿ ವಿಚಾರವಾಗಿ ಮಗ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆಗೈದಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಜಕ್ಕೇರುಮಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದವ್ವ(55) ಮಗನಿಂದಲೇ ಕೊಲೆಯಾದ ಮಹಿಳೆ. ಕುಮಾರ ತಾಅಯಿಯನ್ನೇ ಹತ್ಯೆಗೈದ ಮಗ.
ಆಸ್ತಿ ವಿಚಾರವಾಗಿ ತಾಯಿ-ಮಗನ ನಡುವೆ ಗಲಾಟೆ ನಡೆದಿದೆ. ಕಂಠಪೂರ್ತಿ ಕುಡಿದು ಬಮ್ದ ಮಗ ಮದ್ಯದ ನಶೆಯಲ್ಲಿ ತಾಯಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದಾನೆ. ಮಗ ಕುಮಾರ್ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ರಾಯಚೂರಿನ ಸ್ವಗ್ರಾಮಕ್ಕೆ ಬಂದಿದ್ದ. ಈ ವೇಳೆ ಗಲಾಟೆಯಾಗಿದೆ.
ಮೂರು ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಅಣ್ಣ-ತಮ್ಮಂದಿರಿಗೆ ಪಾಲು ಮಾಡುವಂತೆ ಕುಮಾರ್ ತಾಯಿಗೆ ಹೇಳಿದ್ದ. ಆಸ್ತಿ ಪಾಲು ಮಾಡಲು ತಾಯಿ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಗಿದೆ.
ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೊಲೆಗೈರು ಪರಾರಿಯಾಗಿರುವ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

