HomeLatest NewsBIG NEWS: ದೇವಸ್ಥಾನದ ಪೂಜೆ ವಿಚಾರಕ್ಕೆ ಸಹೋದರರ ನಡುವೆ ಮಾರಾಮಾರಿ: 10 ಜನರ ವಿರುದ್ಧ FIR...

BIG NEWS: ದೇವಸ್ಥಾನದ ಪೂಜೆ ವಿಚಾರಕ್ಕೆ ಸಹೋದರರ ನಡುವೆ ಮಾರಾಮಾರಿ: 10 ಜನರ ವಿರುದ್ಧ FIR ದಾಖಲು

ರಾಯಚೂರು: ದೇವಸ್ಥಾನದ ಪೂಜೆ ವಿಚಾರವಾಗಿ ಸಹೋದರರ ನಡುವೆ ಮಾರಾಮಾರಿ ನಡೆದಿದ್ದು, ಎರಡೂ ಕುಟುಂಬಗಳು ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ವಡಗಟ್ಟಿ ಗ್ರಾಮದಲ್ಲಿ ನಡೆದಿದೆ.

ಎರಡು ಕುಟುಂಬಗಳು ದೊಣ್ಣೆ, ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡು ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಕ್ಷ್ಮೀ ರಂಗನಾಥ ದೇವಸ್ಥಾನದ ಪೂಜೆ ವಿಚಾರವಾಗಿ ವೆಂಕಟೇಶ್ ಹಾಗೂ ಸಹೋದರ ತಿಮ್ಮಯ್ಯ ನಡುವೆ ಕಿರಿಕ್ ನಡೆದು, ತಿಮ್ಮಯ್ಯ, ಜಗನಯ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು, ವೆಂಕಟೇಶ್, ನಾಗರಾಜ್, ಸುಮಿತ್ರಾ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹತ್ತು ವರ್ಷಗಳಿಂದ ತಿಮ್ಮಯ್ಯ ಕುಟುಂಬ ದೇವಸ್ಥಾನದಲ್ಲಿ ಪೂಜೆ ನಡೆಸುತ್ತಿತ್ತು. ದೇವಸ್ಥಾನದ ಪೂಜೆಗೆ ನಮಗೂ ಅವಕಾಶ ಕೊಡಿ ಎಂದು ವೆಂಕಟೇಶ್ ಕುಟುಂಬ ಕೇಳಿದೆ. ಇದೇ ವಿಚಾರವಗಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತಿಮ್ಮಯ್ಯ, ವೆಂಕಟೇಶ್, ನಾಗರಾಜ್, ಹನುಮೇಶ್ ಸೇರಿದಂತೆ ಹತ್ತು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular