ರಾಯಚೂರು: ಆಲ್ಬಂ ಸಾಂಗ್ ಬಿಡುಗಡೆಗಾಗಿ ಪೋಸ್ಟರ್ ಅಳವಡಿಸುತ್ತಿದ್ದಾಗ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ಕುಸಿದು ಬಿದ್ದು ಮೂವರು ವಿದ್ಯರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಬಸ್ ನಿಲ್ದಾಣದ ಬಳಿ ನಡೆದಿದೆ.
ನಾಗರಾಜ್, ರವಿಚಂದ್ರ ಹಾಗೂ ಅರ್ಜುನ್ ಮೃತ ವಿದ್ಯಾರ್ಥಿಗಳು. ಕ್ಯಾದಿಗೇರಾ ಗ್ರಾಮದ ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯಕಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿಗಳೇ ಸೇರಿಕೊಂಡು ಲವ್ ಎಂಬ ಆಲ್ಬಂ ಸಾಂಗ್ ಸಿದ್ಧ ಪಡಿಸಿದರು. ಮ್ಯೂಸಿಕ್ ಟೀಂ ಕಟ್ಟುವ ಉದ್ದೇಶದಿಂದ ಕೆಲ ವಿದ್ಯಾರ್ಥಿಗಳು ಸೇರಿಕೊಂಡು ಆಲ್ಬಂ ಸಾಂಗ್ ಮಾಡಿದ್ದರು, ಆಲ್ಬಂ ಸಾಂಗ್ ಬಿಡುಗಡೆಗೆ ನಗರದಲ್ಲಿ ಪೋಸ್ಟರ್ ಅಳವಡಿಸುತ್ತಿದ್ದರು. ದೇವದುರ್ಗ ಬಸ್ ನಿಲ್ದಾಣ ಬಳಿಯ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಪೋಸ್ಟರ್ ಅಳವಡಿಸುತ್ತಿದ್ದಾಗ ಏಕಾಏಕಿ ಕಾಂಪ್ಲೆಕ್ಸ್ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳ ಅಡಿ ಸುಲುಕಿದ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೂಡ ಸಾವನ್ನಪ್ಪಿದ್ದಾರೆ. ಆಲಬಂ ಸಾಂಗ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳು ಪೋಸ್ಟರ್ ಅಳವಡುಸುವ ವೇಳೆಯೇ ದುರಂತ ಅಂತ್ಯ ಕಂಡಿದ್ದಾರೆ. ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಡೆಸಿದ್ದಾರೆ.
ಮೃತ ವಿದ್ಯಾರ್ಥಿ ನಾಗರಾಜ್ ಗೆ ಸಿನಿಮಾ ಹಿರೋ ಆಗಬೇಕು ಎಂಬ ಕನಸಿತ್ತು. ಹಾಗಾಗಿ ಕಾಲೇಜು ದಿನಗಳಲ್ಲಿಯೇ ಶಾರ್ಟ್ ಫಿಲ್ಮ್, ರೀಲ್ಸ್, ಸ್ಟೋರಿಬರೆಯುತ್ತಿದ್ದ . ವಿದ್ಯಾರ್ಥಿಗಳ ತಂಡ ಕಟ್ಟಿ ಆಲ್ಬಂ ಸಾಂಗ್ ಮಾಡಿದ್ದ. ಆಲ್ಬಂ ಸಾಂಗ್ ಬಿಡುಗಡೆ ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ಆದರೆ ಆಲ್ಬಂ ಸಾಂಗ್ ಬಿಡುಗಡೆಗೂ ಮುನ್ನವೇ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

