HomeKarnatakaBIG NEWS: ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಹೃದಯಸ್ತಂಭನದಿಂದ ಸಾವು

BIG NEWS: ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಹೃದಯಸ್ತಂಭನದಿಂದ ಸಾವು

ರಾಯಚೂರು: ಕೆಲ ದಿನಗಳ ಹಿಂದೆ ಸಿಂಧನೂರು ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂತ್ರಾಲಯ ರಾಯರ ಮಠದ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿ ಇಂದು ಮುಂಜಾನೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ.

ಜಯಸಿಂಹ (23) ಮೃತ ವಿದ್ಯಾರ್ಥಿ. ಕಳೆದ 23 ದಿನಗಳಿಂದ ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜ.21ರಂದು ರಾಯಚೂರಿನ ಸಿಂಧನೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಜಯಸಿಂಹ ತಲೆ, ಬೆನ್ನು, ಶ್ವಾಸಕೋಶ ಸೇರಿ ದೇಹದ ಹಲವೆಡೆ ಗಂಭೀರವಾದ ಪೆಟ್ಟುಬಿದ್ದಿತ್ತು. ಮಂತ್ರಾಲಯದಿಂದ ಆನೆಗುಂದಿಗೆ ತೆರಳುತ್ತಿದ್ದ ಕ್ರೂಸರ್ ವಾಹನ ಪಲ್ಟಿಯಾಗಿ ಈ ದುರಂತ ಸಂಭವಿಸಿತ್ತು. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದರು. 10 ಜನರು ಗಾಂಭೀರವಾಗಿ ಗಾಯಗೊಂಡಿದ್ದರು.

ಇದೀಗ ಗಾಯಾಳು ಜಯಸಿಂಹ ಹೃದಯಸ್ತಂಭನದಿಂದ ವಿಧಿವಶನಾಗಿದ್ದಾನೆ. ಸಿಂಧನೂರು ಸಂಚಾರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular