ವಯನಾಡು ಸಂತ್ರಸ್ತರ ನೆರವಿಗೆ ಮುಂದಾದ ರಾಹುಲ್ ಗಾಂಧಿ; ತಿಂಗಳ ಸಂಬಳ ದೇಣಿಗೆ ನೀಡಿ ಸಹಾಯ ಮಾಡುವಂತೆ ಕರೆ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿನ ಸಂತ್ರಸ್ತರ ಪುನರ್ವಸತಿ ಕಾರ್ಯಗಳಿಗಾಗಿ ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ ) ಮಾಹಿತಿ ಹಂಚಿಕೊಂಡಿದ್ದು ತಮ್ಮ ಒಂದು ತಿಂಗಳ ವೇತನ 2.3 ಲಕ್ಷ ರೂಪಾಯಿಗಳನ್ನು ರಾಹುಲ್ ಗಾಂಧಿಯವರು ದೇಣಿಗೆ ನೀಡಿದ್ದಾರೆ ಎಂದು ಪ್ರಕಟಿಸಿದೆ.

ಇದು ವಯನಾಡಿನಲ್ಲಿ ತಮ್ಮ ಆತ್ಮೀಯರು, ಮನೆಗಳು ಮತ್ತು ಜೀವನೋಪಾಯವನ್ನು ಕಳೆದುಕೊಂಡವರಿಗೆ ಪಕ್ಷವು 100 ಮನೆಗಳನ್ನು ನಿರ್ಮಿಸಿ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ ನಂತರ ಕಾಂಗ್ರೆಸ್ ರಾಜ್ಯ ಘಟಕವು ಸಂಗ್ರಹಿಸುತ್ತಿರುವ ನಿಧಿಯ ಭಾಗವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಿಜು ಹೇಳಿದ್ದಾರೆ.

ಇದಕ್ಕೂ ಮುನ್ನ ತಮ್ಮ ಎಕ್ಸ್ ಖಾತೆಯಲ್ಲಿ ರಾಹುಲ್ “ವಯನಾಡಿನಲ್ಲಿ ನಮ್ಮ ಸಹೋದರರು ಮತ್ತು ಸಹೋದರಿಯರು ವಿನಾಶಕಾರಿ ದುರಂತವನ್ನು ಅನುಭವಿಸಿದ್ದಾರೆ ಮತ್ತು ಅವರು ಎದುರಿಸಿದ ಊಹಿಸಲಾಗದ ನಷ್ಟದಿಂದ ಚೇತರಿಸಿಕೊಳ್ಳಲು ಅವರಿಗೆ ನಮ್ಮ ಬೆಂಬಲ ಬೇಕು. ನಾನು ನನ್ನ ತಿಂಗಳ ಸಂಪೂರ್ಣ ಸಂಬಳವನ್ನು ಪರಿಹಾರಕ್ಕಾಗಿ ದಾನ ಮಾಡಿದ್ದೇನೆ. ಭೂಕುಸಿತದಿಂದ ಬಾಧಿತರಾದವರಿಗೆ ಪುನರ್ವಸತಿ ಕೆಲಸಗಳಿಗಾಗಿ ತಮ್ಮಿಂದಾಗುವ ಕೊಡುಗೆ ನೀಡುವಂತೆ ನಾನು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇನೆ” ಎಂದು ಹೇಳಿಕೊಂಡಿದ್ದರು.

“ವಯನಾಡ್ ನಮ್ಮ ದೇಶದ ಒಂದು ಸುಂದರ ಭಾಗವಾಗಿದೆ ಮತ್ತು ಒಟ್ಟಿಗೆ ನಾವು ಎಲ್ಲವನ್ನೂ ಕಳೆದುಕೊಂಡಿರುವ ಅಲ್ಲಿನ ಜನರ ಜೀವನವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡಬಹುದು. ನೀವು ಸುರಕ್ಷಿತವಾಗಿ @INCKerala ನಿಧಿಗೆ Stand With Wayanad – INC ಅಪ್ಲಿಕೇಶನ್ ಮೂಲಕ ಕೊಡುಗೆ ನೀಡಬಹುದು” ಎಂದು ಕೇಳಿಕೊಂಡಿದ್ದರು.

ಏತನ್ಮಧ್ಯೆ, ಕಾಂಗ್ರೆಸ್ ಸಂಸದ ಕೆ.ಸುಧಾಕರನ್ ವಯನಾಡ್ ಪುನರ್ವಸತಿ ಪ್ರಯತ್ನಗಳ ಪ್ರಗತಿಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ನಿಧಿಸಂಗ್ರಹ ಅಭಿಯಾನವನ್ನು ಮುನ್ನಡೆಸಲು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿದೆ ಮತ್ತು ಪೀಡಿತ ಪ್ರದೇಶಗಳಲ್ಲಿ ಪುನರ್ನಿರ್ಮಾಣ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುತ್ತಿದೆ.

ಜುಲೈ 30 ರಂದು ವಯನಾಡಿನ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಪುಂಚಿರಿಮಟ್ಟಂ, ಚೂರಲ್ಮಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ್ದು, 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

https://twitter.com/RahulGandhi/status/1831243541126742425?ref_src=twsrc%5Etfw%7Ctwcamp%5Etweetembed%7Ctwterm%5E1831243541126742425%7Ctw

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read