ದೇಶದಲ್ಲಿ ಸರಣಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳು ಹಾಗೂ ಯುವಕರ ನಿರುದ್ಯೋಗ ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಯುವ-ವಿರೋಧಿ ಪ್ರಧಾನಿ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವೈಫಲ್ಯಗಳನ್ನು ಎತ್ತಿ ತೋರಿಸಿದ್ದು, ಪ್ರಧಾನಿಯವರು ವಿಫಲ ಸಚಿವರ ರಾಜೀನಾಮೆಯನ್ನು ಸಹ ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
152 ಪ್ರಶ್ನೆಪತ್ರಿಕೆ ಸೋರಿಕೆ 7.5 ಕೋಟಿ ವಿದ್ಯಾರ್ಥಿಗಳಿಗೆ ಸಂಕಷ್ಟ:
ದೇಶದಲ್ಲಿ ಬರೋಬ್ಬರಿ 152 ಪರೀಕ್ಷಾ ಪೇಪರ್‌ಗಳು ಸೋರಿಕೆಯಾಗಿದ್ದು, ಸುಮಾರು 7.5 ಕೋಟಿಗೂ ಹೆಚ್ಚು ಯುವಜನತೆ ಮತ್ತು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈವರೆಗೆ ಒಬ್ಬೇ ಒಬ್ಬ ಮುಖ್ಯ ದೋಷಿಗೂ ಕಠಿಣ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.
ಪ್ರಾಮಾಣಿಕ ಯುವಕರಿಗೆ ಶಿಕ್ಷೆ, ಅಪರಾಧಿಗಳು ಮುಕ್ತ:
ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವ ಪ್ರಾಮಾಣಿಕ ಯುವಕರಿಗೆ ಶಿಕ್ಷೆಯಾಗುತ್ತಿದ್ದರೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾ ಹಾಗೂ ಅಪರಾಧಿಗಳು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಲಠಿಚಾರ್ಜ್ ಹಾಗೂ ವಶಕ್ಕೆ:
ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆಗಾಗಿ ನ್ಯಾಯಯುತವಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದ ಉತ್ತರ ಲಾಠಿಚಾರ್ಜ್ ಮತ್ತು ಪೊಲೀಸ್ ಬಂಧನ. ವಿದ್ಯಾರ್ಥಿಗಳನ್ನು ರಸ್ತೆಗಳಲ್ಲಿ ಎಳೆದೊಯ್ದು ಹೂಡೆಯಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್ ಗಾಂಧಿ ಅವರ ವಾಗ್ದಾಳಿ:
“ಈ ಪ್ರಸ್ತುತ ಕೇಂದ್ರ ಸರ್ಕಾರವು ಕೇವಲ ಯುವಜನತೆಯನ್ನು ತಲುಪುವಲ್ಲಿ ಅಥವಾ ಅವರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿಲ್ಲ, ಬದಲಿಗೆ ಅವರ ಮೇಲೆಯೇ ದಾಳಿ ನಡೆಸುತ್ತಿದೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರ ಯುವ ವಿರೋಧಿ ನೀತಿಯನ್ನು ತಳೆದಿದೆ

