ಮೂಲಂಗಿಯಲ್ಲಿ ಅಡಗಿದೆ 7 ರೋಗಕ್ಕೆ ಮದ್ದು

ಚಳಿಗಾಲ ಆರಂಭವಾಗಿದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅನೇಕ ಜಾತಿಯ ಸೊಪ್ಪುಗಳು, ತರಕಾರಿಗಳು ಸಿಗುತ್ತವೆ. ಸೊಪ್ಪು ತಿಂದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಜನರು ಹೆಚ್ಚು ಹೆಚ್ಚು ಸೊಪ್ಪುಗಳನ್ನು ಕೊಳ್ಳುತ್ತಾರೆ. ಸೊಪ್ಪಿನ ಹಾಗೆ  ಮೂಲಂಗಿ ಕೂಡ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಮೂಲಂಗಿ ಸೇವನೆಯಿಂದ ಅನೇಕ ಲಾಭಗಳಿವೆ.

ಚಳಿಗಾಲದಲ್ಲಿ ಮೂಲಂಗಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ನಿಮ್ಮನ್ನು ಶೀತ, ಕೆಮ್ಮಿನಿಂದ ದೂರ ಇಡುತ್ತದೆ. ಮೂಲಂಗಿಯಲ್ಲಿರುವ ಎಂಥೇಸರನಿನ್ ಹೃದಯಸಂಬಂಧಿ ಖಾಯಿಲೆಗಳನ್ನು ದೂರ ಮಾಡುತ್ತದೆ. ಇದು ಹೃದಯದ ಆರೋಗ್ಯ ವೃದ್ಧಿಸಲು ಒಳ್ಳೆಯದು.

 ಮಧುಮೇಹ ರೋಗಿಗಳಿಗೆ ಮೂಲಂಗಿ ಬಹಳ ಒಳ್ಳೆಯದು. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಿಪಿ ತುಂಬ ಹೆಚ್ಚಿದ್ದಲ್ಲಿ ಅಂತವರು ಮೂಲಂಗಿಯ ಸೇವನೆ ಮಾಡಬಾರದು. ಶರೀರದಲ್ಲಿ ಬಹಳ ಸುಸ್ತು ಎನಿಸಿದಾಗ ಮೂಲಂಗಿಯ ರಸವನ್ನು ಬಿಸಿಮಾಡಿ ಅದಕ್ಕೆ ಕಲ್ಲುಪ್ಪನ್ನು ಸೇರಿಸಿ ಗಾರ್ಗ್ಲಿಂಗ್ ಮಾಡಬೇಕು. ಹಲ್ಲುಗಳು ಹಳದಿಬಣ್ಣವಾಗಿದ್ದಲ್ಲಿ ಮೂಲಂಗಿಯ ಸಣ್ಣ ತುಣುಕನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಹಚ್ಚಿ ಹಲ್ಲನ್ನು ಉಜ್ಜಿ. ಹೀಗೆ ಮಾಡುವುದರಿಂದ ಹಲ್ಲುಗಳು ಹೊಳೆಯುತ್ತವೆ.

ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಚಯಾಪಚಯ ಸಮಸ್ಯೆಯಿರುವವರು, ಮೂಲಂಗಿ ಸೇವನೆಯನ್ನು ಮಾಡಬೇಕು. ಸತತವಾಗಿ ಮೂಲಂಗಿಯನ್ನು ತಿನ್ನುವುದರಿಂದ ಕಿಡ್ನಿ ಮತ್ತು ಲಿವರ್ ಆರೋಗ್ಯವಾಗಿರುತ್ತದೆ. ಮೂಲಂಗಿ ಹಸಿವನ್ನು ಹೆಚ್ಚಿಸುತ್ತದೆ. ಮೂಲವ್ಯಾಧಿಗೆ ಮೂಲಂಗಿ ಒಳ್ಳೆಯದು. ಮೂಲವ್ಯಾಧಿ ಸಮಸ್ಯೆಯಿರುವವರು ಮೂಲಂಗಿಯ ರಸವನ್ನು ಸೇವನೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read