‘ಲವ್ 360’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ; ಸಂತಸ ಹಂಚಿಕೊಂಡ ರಚನಾ ಇಂದರ್

Love 360 2022 watch online OTT Streaming of movie on Sun NXT

ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಡೂಪರ್ ಹಿಟ್ ‘ಲವ್ 360’ ಸಿನಿಮಾ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಸಂತಸವನ್ನು ನಟಿ ರಚನಾ ಇಂದರ್ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಲವ್ 360’ ಅವಿಸ್ಮರಣೀಯ ಚಿತ್ರವಾಗಿ ಇರುವುದು ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಅವಕಾಶ ನೀಡಿದ ಶಶಾಂಕ್ ತಾಳ್ಯ ಅವರಿಗೆ ಧನ್ಯವಾದಗಳು. ಚಿತ್ರತಂಡಕ್ಕೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಶಶಾಂಕ್ ನಿರ್ದೇಶನದ ರೋಮ್ಯಾಂಟಿಕ್ ಕ್ರೈಂ ತ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರವೀಣ್ ಕುಮಾರ್ ಮತ್ತು ರಚನಾ ಇಂದರ್ ಪ್ರಮುಖ ಪಾತ್ರದಲ್ಲಿದ್ದು, ಕಾವ್ಯ ಶಾಸ್ತ್ರಿ ಸೇರಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸುಕನ್ಯಾ ಗಿರೀಶ್, ಮಹಾಂತೇಶ ಹಿರೇಮಠ್ ತೆರೆ ಹಂಚಿಕೊಂಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿರುವ ಈ ಸಿನಿಮಾ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read