HomeKarnatakaBIG NEWS: ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ; 3.45 ಕೋಟಿ ನಗದು ಹಣ ಜಪ್ತಿ;...

BIG NEWS: ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ; 3.45 ಕೋಟಿ ನಗದು ಹಣ ಜಪ್ತಿ; ಕಮಿಷ್ನರ್ ಬಿ.ದಯಾನಂದ್ ಮಾಹಿತಿ

ಬೆಂಗಳೂರು: ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಕಮಿಷ್ನರ್ ಬಿ.ದಯಾನಂದ್ ಮಾಹಿತಿ ನೀಡಿದ್ದು, ಅಧಿಕೃತ, ಅನಧಿಕೃತ ಬೆಟ್ಟಿಂಗ್ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ವೇಳೆ ಯಾವುದೇ ರಶೀದಿ, ದಾಖಲೆಗಳು ಇಲ್ಲದೇ ಹಣದ ವ್ಯವಹಾರ ನಡೆಯುತ್ತಿರುವುದು ತಿಳಿದುಬಂದಿದೆ. 3.45 ಕೋಟಿ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಅಕ್ರಮ ಬೆಟ್ಟಿಂಗ್ ನಿಂದ ಶೇ.28ರಷ್ಟು ಜಿಎಸ್ ಟಿ ತೆರಿಗೆ ವಂಚನೆ ಆಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ವಿಶೇಶ ತಂಡ ದಾಳಿ ನಡೆಸಿತ್ತು. ಪ್ರಕರಣ ಸಂಬಂಧ 66 ಜನರಿಂದ ಮಾಹಿತಿ ಪಡೆದು ಐಪಿಸಿ ಸೆಕ್ಷ 41 ಅಡಿ ನೋಟಿಸ್ ನೀಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular