ಕೋಲ್ಕತ್ತಾ: ಕೋಲ್ಕತ್ತಾ ಆರ್.ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಗಳ ಸಾವಿಗೆ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಜೂನಿಯರ್ ವೈದ್ಯನಾಗಿರುವ ಆಕೆಯ ಗೆಳೆಯನೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ 24 ವರ್ಷದ ವಿದ್ಯಾರ್ಥಿನಿ ಮಾಲ್ಡಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಆಕೆಯ ಕುಟುಂಬ ಆಕೆಯ ಗೆಳೆಯ ಉಜ್ವಲ್ ಸೊರೆನ್ ವಿರುದ್ಧ ದೂರು ದಾಖಲಿಸಿದೆ. ಆತನೇ ಆಕೆಗೆ ವಿಷ ಪ್ರಾಶನ ಮಾಡಿಸಿ ಬಳಿಕ ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷಾ ವರದಿ ಬಳಿಕವೇ ಸಾವಿನ ರಹಸ್ಯ ಬಯಲಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಿನಾಜ್ ಪುರ ನಿವಾಸಿಯಾಗಿದ್ದ ವಿದ್ಯಾರ್ಥಿನಿಗೆ ಸೋಷಿಯಲ್ ನೀಡಿಯಾ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಉಜ್ವಲ್ ಪರಿಚಯವಾಗಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಉಜ್ವಲ್ ಆಕೆಯನ್ನು ವಿವಾಹವಾಗಲು ಸುದ್ಧನಿರಲಿಲ್ಲ. ವಿದ್ಯಾರ್ಥಿನಿ ಮದುವೆಗೆ ಒತ್ತಾಯಿಸುತ್ತಿದ್ದಳು. ಹಾಗಾಗಿ ಇಬ್ಬರ ನಡುವೆ ಜಗಳಗಳವಾಗಿತ್ತು. ನಿನ್ನೆ ಒಂದು ಫೋನ್ ಕಾಲ್ ಬಂದಿತ್ತು. ನಿಮ್ಮ ಮಗಳು ತೀವ್ರ ಅಸ್ವಸ್ಥಳಾಗಿದ್ದು ಮಾಲ್ಡಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂದು ಆಕೆ ಮೃತಪಟ್ಟಿದ್ದಾಳೆ. ಮಗಳ ಸಾವಿನ ಹಿಂದೆ ಉಜ್ವಲ್ ಕೈವಾಡವಿದೆ ಎಂದು ಮೃತ ವಿದ್ಯಾರ್ಥಿನಿಯ ತಾಯಿ ಅಲ್ಪನಾ ಆರೋಪಿಸಿದ್ದಾರೆ.