ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಹಾಗೂ ಅನಂತರದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಕೊಲೆಗೆ ಕೊಲೆ ಎಂಬ ಮನಸ್ಥಿತಿ ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕೈ ಚೆಲ್ಲಿ ಕುಳಿತ್ದೆ. 144 ಸೆಕ್ಷನ್ ಜಾರಿ ಮಾಡಿದ ತಕ್ಷಣ ಕಾನೂನು ಪಾಲನೆಯಾಗುತ್ತದೆ ಎಂದು ಸರ್ಕಾರ ತಿಳಿದುಕೊಂಡಿದೆ. ಅದನ್ನು ಬಿಟ್ಟು ಕಾನೂನನ್ನು ಸರಿಯಾಗಿ ಪರಿಪಾಲನೆ ಮಡಬೇಕು ಎಂಬುದು ಸರ್ಕಾರದಲ್ಲಿ ಮರೀಚಿಕೆಯಾಗಿದೆ ಎಂದರು.
ಲವ್ ಜಿಹಾದ್ ಗಳು ನಡೆಯುತ್ತಿವೆ, ಪಾಕಿಸ್ತಾನ ಜಿಮ್ದಾಬಾದ್ ಘೋಷಣೆ ಕೇಳಿಬರುತ್ತಿವೆ. ಕರಾವಳಿ ಭಾಗದಲ್ಲಂತೂ ಭಯೀತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಈಗ ಅಲ್ಲಿ ಕೊಲೆಗೆ ಕೊಲೆ ಎಂಬ ಮನಸ್ಥಿತಿ ಬಂದಿರುವುದು ಸರಿಯಲ್ಲ. ಎಲ್ಲೋ ಒಂದುಕಡೆ ಸರ್ಕಾರ ಕಾನೂನು ಜಾರಿಗೆ ತರವ ಬದಲು ಯಾರನ್ನೋ ಓಲೈಕೆ ಮಾಡಲು ಮುಂದಾಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.