HomeKarnatakaಬೆಂಗಳೂರಿನಲ್ಲಿ 3 ದಿನಗಳಿಂದ ವಿಲೇವಾರಿಯಾಗದ ಕಸ: ಇನ್ನೆರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಗಬ್ಬೆದ್ದು ನಾರಲಿದೆ: ಸರ್ಕಾರದ...

ಬೆಂಗಳೂರಿನಲ್ಲಿ 3 ದಿನಗಳಿಂದ ವಿಲೇವಾರಿಯಾಗದ ಕಸ: ಇನ್ನೆರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಗಬ್ಬೆದ್ದು ನಾರಲಿದೆ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗಿದೆ. ಬೆಂಗಳೂರು ನಗರದಿಂದ ಕಸ ತುಂಬಿಕೊಂಡು ಹೋಗುತ್ತಿದ್ದ ಕಸದ ವಾಹನಗಳನ್ನು ಡಂಪಿಂಗ್ ಯಾರ್ಡ್ ಬಳಿ ತಡೆದಿರುವ ಗ್ರಾಮಸ್ಥರು ಕಸ ಸುರಿಯಲು ಬಿಡದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಕಸ ತುಂಬಿರುವ ಲಾರಿಗಳು ಡಂಪಿಂಗ್ ಯಾರ್ಡ್ ಬಳಿ ಕಿಲೋ ಮೀಟರ್ ಗಟ್ಟಲೆ ಸಾಲು ಹಿಡಿದು ನಿಂತಿದ್ದು, ಕಸವಿಲೇವಾರಿ ಸ್ಥಗಿತಗೊಂಡಿದೆ.

ಬಾಗಲೂರು, ಮಹದೇವಪುರ, ದೊಡ್ಡಬಳ್ಳಾಪುರ ಸೇರಿದಂತೆ ಹಲವೆಡೆ ಕಸದ ಲಾರಿಗಳನ್ನು ತಡೆದಿರುವ ಗ್ರಾಮಸ್ಥರು ಪ್ರತಿಭಟನೆ ಮಡೆಸಿದ್ದು, ಕಸ ವಿಲೇವಾರಿ ಮಾಡಲು ಬಿಡದೆ ತಡೆಯೊಡ್ದಿದ್ದಾರೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಪೌರಕಾರ್ಮಿಕರು ಬಾರದೇ ಮತ್ತೆ ಎಲ್ಲೆಂದರಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.

ಇದೇ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಈ ಸರ್ಕಾರಕ್ಕೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡಿಸುವ ಯೋಗ್ಯತೆಯೂ ಇಲ್ಲ ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕಸವನ್ನೇ ತೆಗೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಹಾಗೇ ಇದೆ. ರಿಂಗ್ ರೋಡ್ ಗೆ ಹೋದರೆ ರಸ್ತೆ ತುಂಬ ಕಸದ ರಾಶಿಯೇ ಇದೆ. ಇನ್ನೆರಡು ದಿನ ಕಳೆದರೆ ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಗುತ್ತದೆ. ಸಿಲಿಕಾನ್ ಸಿಟಿ ಗಬ್ಬೆದ್ದು ನಾರುತ್ತದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಹೆಚ್ಚುತ್ತಿದೆ. ನನಗನ್ನಿಸುತ್ತಿದೆ ಪೌರಕಾರ್ಮಿಕರಿಗೆ ಹಾಗೂ ಕಸ ತೆಗೆಯುವವರಿಗೆ ಸಂಬಳವನ್ನೇ ಕೊಟ್ಟಿಲ್ಲ. ಸರ್ಕಾರಕ್ಕೆ ಕಸ ತೆಗೆಯುವ ಯೋಗ್ಯತೆಯೂ ಇಲ್ಲ. ಸಂಬಳಕೊಟ್ಟಿಲ್ಲ. ಅನುದಾನ ಬಿಡಿಗಡೆ ಮಾಡಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಯಿಂದಾಗಿ ಗಬ್ಬೆದ್ದು ಹೋಗಲಿದೆ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular