ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಅವಕಾಶ

ಹಾಸನ: ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಅವಕಾಶ ನೀಡಲಾಗಿದೆ. ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಗಿದೆ.

ರೂಢಿ ಪದ್ಧತಿಯಂತೆ ಜಿಲ್ಲಾಡಳಿತ ಕುರಾನ್ ಪಠಣಕ್ಕೆ ಅವಕಾಶ ನೀಡಿದೆ. ಆದರೆ, ರಥದ ಎದುರಿನ ಬದಲು ದೇಗುಲದ ಮೆಟ್ಟಿಲ ಬಳಿ ಕುರಾನ್ ಪಟ್ಟಣಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಕಳೆದ ಆರು ವರ್ಷಗಳ ಹಿಂದಿನಿಂದ ಜಾರಿಯಲ್ಲಿರುವ ರೂಢಿ ಪದ್ಧತಿಯಂತೆ ಕುರಾನ್ ಪಠಣಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.

ಬೇಲೂರಿನ ಚೆನ್ನಕೇಶವ ದೇವಾಲಯದ ಮ್ಯಾನುವಲ್ ನಲ್ಲಿ ಮುಸಲ್ಮಾನ್ ಸಮುದಾಯದ ಖಾಜಿ ಸಾಹೇಬರಿಂದ ದೇವರಿಗೆ ವಂದನೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ರೂಢಿ ಸಂಪ್ರದಾಯದಂತೆ ಕುರಾನ್ ಪಠಣಕ್ಕೆ ಅವಕಾಶ ನೀಡಲಾಗಿದೆ. ನಾಳೆ ರಥೋತ್ಸವಕ್ಕೆ ಮೊದಲು ಮೇದೂರಿನ ಖಾಜಿ ಸಾಹೇಬರ ಕುಟುಂಬಸ್ಥರು ಕುರಾನ್ ಪಠಣ ಮಾಡಲಿದ್ದಾರೆ. ಹಿಂದೂಪರ ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಥೋತ್ಸವದ ವೇಳೆ ಯಾವುದೇ ಗೊಂದಲ ಆಗದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸುತ್ತೋಲೆಯಂತೆ ಹಾಸನ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read