ದೇಶಾದ್ಯಂತ ಏಕರೂಪದ ಕ್ಯೂಆರ್ ಕೋಡ್ DL, RC ಗೆ ಕೇಂದ್ರದಿಂದ ನಿಯಮ: ರಾಜ್ಯದಲ್ಲಿ ಸೆಪ್ಟಂಬರ್ ನಿಂದ ಜಾರಿಗೆ ಸಾರಿಗೆ ಇಲಾಖೆ ಸಿದ್ದತೆ

ಬೆಂಗಳೂರು: ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣ ಪತ್ರ ಜಾರಿಗೆ ಕೇಂದ್ರದಿಂದ ನಿಯಮ ತಂದಿದ್ದು, ಆರ್.ಸಿ., ಡಿಎಲ್ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಡಿಎಲ್ ಮತ್ತು ಆರ್.ಸಿ.ಗಳಲ್ಲಿ ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನ ಸಂಪೂರ್ಣ ವಿವರ ಮತ್ತು ಚಾಲಕನ ವಿವರ ಸಿಗಲಿದೆ. ವಾಹನಗಳ ಮೇಲೆ ಕೇಸುಗಳಿದ್ದರೆ ಮಾಹಿತಿಯೂ ಗೊತ್ತಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಕ್ಯೂಆರ್ ಕೋಡ್ ಇರುವ ಡಿಎಲ್ ಮತ್ತು ಆರ್.ಸಿ. ಮುದ್ರಿಸಿ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಈ ತಿಂಗಳಾಂತ್ಯಕ್ಕೆ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಸೆಪ್ಟೆಂಬರ್ ನಿಂದ ಹೊಸ ರೀತಿಯ ಡಿಎಲ್ ಮತ್ತು ಆರ್.ಸಿ. ವಿತರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಡಿಎಲ್ ನಲ್ಲಿ ಚಾಲಕನ ಹೆಸರು, ಜನ್ಮ ದಿನಾಂಕ, ವಿಳಾಸ, ರಕ್ತದ ಗುಂಪು ಇರುತ್ತಿದ್ದವು, ಇದರ ಜೊತೆಗೆ ಡಿಎಲ್ ಹೊಂದಿರುವವರು ಅಂಗಾಂಗದ ದಾನಿಯಾಗಿದ್ದಾರೆಯೇ ಎಂಬುದನ್ನು ನಮೂದಿಸಲಾಗುವು. ಡಿಎಲ್ ಹೊಂದಿದವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗುವುದು.

ಡಿಎಲ್ ಮತ್ತು ಆರ್.ಸಿ. ಕಾರ್ಡ್ ನ ಒಂದು ಬದಿಯಲ್ಲಿ ಎಲ್ಲಾ ವಿವರಗಳಿದ್ದು, ಇನ್ನೊಂದು ಬದಿಯಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗುವುದು. ವಾಹನ ಮಾಲೀಕರ ಮತ್ತು ವಾಹನದ ಅಥವಾ ಚಾಲಕರ ವಿವರ ನಮೂದಿಸಲಾಗುವುದು. ಲೇಸರ್ ಪ್ರಿಂಟ್ ಗಳಲ್ಲಿ ಇದನ್ನು ಮುದ್ರಿಸಲಾಗುವುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ವಿವರ ಲಭ್ಯವಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read