ಟಾಯ್ಲೆಟ್ ಗೆ ಹೋಗಿದ್ದವನ ವೃಷಣಕ್ಕೆ ಬಾಯಿ ಹಾಕಿದ ಹೆಬ್ಬಾವು……!

ಥೈಲ್ಯಾಂಡ್‌ ನಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿ ಬದುಕುಳಿದಿದ್ದಾನೆ. ಶೌಚಾಲಯದಲ್ಲಿ ಮಲ ವಿಸರ್ಜನೆಗೆ ಕುಳಿತಿದ್ದವನ ಖಾಸಗಿ ಅಂಗವನ್ನು ಹೆಬ್ಬಾವು ಕಚ್ಚಿದೆ. ಆತನ ವೃಷಣದ ಮೇಲೆ ಹೆಬ್ಬಾವು ದಾಳಿ ನಡೆಸಿದೆ. ಅದ್ರ ಬಾಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಹರಸಾಹಸ ಮಾಡಿದ್ದಾನೆ. ಶೌಚಾಲಯದ ಬ್ರಷ್‌ ನಿಂದ ಹಾವಿಗೆ ಹೊಡೆದು ಕೊಲೆ ಮಾಡಿದ್ದಾನೆ.

ಥಾನತ್ ಥಂಗ್ಟೆವಾನಾನ್ ಎಂಬ ವ್ಯಕ್ತಿ ಈ ವಿಷ್ಯವನ್ನು ತಿಳಿಸಿದ್ದಾನೆ. ಆತ ವಾಶ್ ರೂಂ ಬಳಸಲು ಕುಳಿತ ತಕ್ಷಣ ತನ್ನ ವೃಷಣಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಏನಾಗಿದೆ ಎಂಬುದನ್ನು ನೋಡಿದಾಗ ಆತನ ಕೈಗೆ ಹಾವು ಸಿಕ್ಕಿದೆ. ಆದ್ರೆ ಹಾವಿನ ಬಾಯಿಂದ ವೃಷ್ಣವನ್ನು ಬಿಡಿಸಲು ಕಷ್ಟವಾಯ್ತು. ಹಾಗಾಗಿ ಶೌಚಾಲಯದ ಬ್ರಷ್‌ ನಿಂದ ಹಾವನ್ನು ಹೊಡೆದಿದ್ದೇನೆ.

ಪೆಟ್ಟು ಹೆಚ್ಚಾಗ್ತಿದ್ದಂತೆ ಗಾಯಗೊಂಡ ಹಾವು ಬಾಯನ್ನು ಸಡಿಲಗೊಳಿಸಿದೆ. ನಂತ್ರ ಥಾನತ್‌ ತಂದೆಗೆ ವಿಷ್ಯ ತಿಳಿಸಿದ್ದಾನೆ. ಹೆಚ್ಚಿನ ಗಾಯವಾಗದ ಕಾರಣ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಗುಣವಾಗಲು ಒಂದೆರಡು ವಾರಗಳು ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ವಿಷಕಾರಿ ಹಾವಲ್ಲದ ಕಾರಣ ಆತ ಬದುಕುಳಿದಿದ್ದಾನೆ. ಸಾಮಾನ್ಯವಾಗಿ ವಿಷರಹಿತ ಹಾವುಗಳ ವರ್ಗಕ್ಕೆ ಸೇರಿದ ಹೆಬ್ಬಾವುಗಳು ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read