HomeEntertainmentಬೆದರಿಕೆ ಆರೋಪ: ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ದೂರು

ಬೆದರಿಕೆ ಆರೋಪ: ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ದೂರು

ಬೆಂಗಳೂರು: ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬೆದರಿಕೆ ಹಾಗೂ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಸಿಸಿಬಿ ಪೊಲೀಸರ ಮೊರೆ ಹೋಗಿದ್ದಾರೆ.

ಸಾಲಗಾರರು ತಮಗೆ ನಿರಂತರ ಕಿರುಕುಳ ನೀಡುತ್ತಿದ್ದು, ಬೆದರಿಕೆ ಹಾಕುತ್ತಿದ್ದಾರೆ. ಕೆಲವರು ಮನೆ ಬಳಿ ಗೂಂಡಾಗಳನ್ನು ಕಳುಹಿಸಿ ಗಲಾಟೆ ಮಾಡುತ್ತಿದ್ದಾರೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ, ಅವನೇ ಶ್ರೀಮನ್ನಾರಾಯಣ, ಗೋಧಿಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವತಾರ ಪುರುಷ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿನ ಕೆಲ ಸಿನಿಮಾಗಳು ಸತತವಾಗಿ ಸೋಲು ಕಾಣುತ್ತಿದ್ದು, ಸಿನಿಮಾದಿಂದ ನಷ್ಟ ಉಂಟಾಗಿದೆ. ಸಿನಿಮಾಗಾಗಿ ಮಾಡಿದ ಸಾಲ ಮರುಪಾವತಿ ಮಾಡಲಾಗದೇ ಸಾಲ ನೀಡಿದವರು ಇದೀಗ ಪುಷ್ಕರ್ ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular