ಪಂಜಾಬ್‌ನ ಲುಧಿಯಾಣದಲ್ಲಿ 85 ವರ್ಷದ ವೃದ್ಧ ತಾಯಿಯನ್ನು ಮಗ ಮತ್ತು ಸೊಸೆ ಸೇರಿ ಹೊಡೆದು ಬಡಿದು ಹಿಂಸೆ ಕೊಟ್ಟಿದ್ದಾರೆ. ಈ ಘಟನೆ ರೈಕೋಟ್ ಪಟ್ಟಣದ ಮೊಹಲ್ಲಾ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
ಗುರ್ನಮ್ ಕೌರ್ ಎಂಬ ವೃದ್ಧ ತಾಯಿ, ಆಕೆಯ ಮಗ ಜಸ್ವೀರ್ ಸಿಂಗ್ ಮತ್ತು ಸೊಸೆ ಗುರ್ಪ್ರೀತ್ ಕೌರ್ ಜೊತೆ ವಾಸಿಸುತ್ತಿದ್ದರು. ಏಪ್ರಿಲ್ 1 ರಂದು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಗುರ್ನಮ್ ಅವರ ಮಗಳು ಹರ್‌ಪ್ರೀತ್ ಕೌರ್ ತನ್ನ ತಾಯಿಯ ಮೇಲೆ ತನ್ನ ಸಹೋದರ ಕ್ರೂರವಾಗಿ ಹಲ್ಲೆ ಮಾಡುವುದನ್ನು ನೋಡಿದ್ದಾಳೆ.
ಮಾರ್ಚ್ 28 ರಂದು ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗ ತಾಯಿಗೆ ಕಪಾಳಮೋಕ್ಷ ಮಾಡಿ, ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ತಾಯಿ ಪ್ರಜ್ಞೆ ತಪ್ಪುವ ಸ್ಥಿತಿಗೆ ತಲುಪಿದಾಗ ನೆಲದ ಮೇಲೆ ಎಳೆದೊಯ್ದಿದ್ದಾನೆ.
ಮಗಳು ಹರ್‌ಪ್ರೀತ್ ಈ ವಿಡಿಯೋವನ್ನು ಮನುಖತಾ ದಿ ಸೇವಾ ಎನ್‌ಜಿಒದ ಅಧ್ಯಕ್ಷ ಗುರ್ಪ್ರೀತ್ ಸಿಂಗ್ ಅಲಿಯಾಸ್ ಮಿಂಟುಗೆ ಕಳುಹಿಸಿದ್ದಾಳೆ. ಗುರ್ಪ್ರೀತ್ ಸಿಂಗ್ ಮತ್ತು ಅವರ ತಂಡ ಗುರ್ನಮ್ ಅವರ ಮನೆಗೆ ಹೋಗಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಪೊಲೀಸರು ಜಸ್ವೀರ್ ಮತ್ತು ಗುರ್ಪ್ರೀತ್ ಅವರನ್ನು ಬಂಧಿಸಿದ್ದಾರೆ. ಸೊಸೆಯ ಕುಮ್ಮಕ್ಕಿನಿಂದ ಮಗ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ವೃದ್ಧ ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
An 85 year old woman was brutally assaulted, slapped and dragged by her son in Raikot of Ludhiana district. Incident came to light after the woman’s daughter in Australia saw the CCTV recording on her phone. The son and his wife arrested. @iepunjab @IndianExpress pic.twitter.com/Cn7hvHetxy
— Divya Goyal (@divya5521) April 3, 2025