ಪಂಜಾಬ್‌ನ ಜಲಂಧರ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ಕಟ್ಟಿ, ವ್ಯಕ್ತಿಯೊಬ್ಬ ಚೆನ್ನಾಗಿ ಥಳಿಸುತ್ತಿದ್ದಾನೆ. ಆತನಿಗೆ ಹೊಡೆಯುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಜಲಂಧರ್ ಫಿಲ್ಲೌರ್ನ ಪಲ್ನೋ ಗ್ರಾಮದಲ್ಲಿ ನಡೆದಿದೆ.
ಬಾಲಕನ ಎರಡೂ ಕಾಲಿಗೆ ಹಗ್ಗ ಕಟ್ಟಿ, ಕೊನೆಗೆ ಮರಕ್ಕೆ ತಲೆಕೆಳಗಾಗಿ ನೇತಾಕಿ ಹೊಡೆಯಲಾಗಿದೆ. ಆತನ ಹೆಸರು ಮಿಥ್ಲೈಶ್. ಇನ್ನೂ ಹೀಗೆ ಹೊಡೆಯುತ್ತಿರುವ ವ್ಯಕ್ತಿ, ಅದೇ ಊರಿನ ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಮನ್ವೀರ್ ಸಿಂಗ್. ಈ ವ್ಯಕ್ತಿ ಬಾಲಕನಿಗೆ ನಿರ್ದಯವಾಗಿ ಹೊಡೆಯುವುದಲ್ಲದೇ, ಆತನ ಪಾಲಕರಿಗೆ ವಿಡಿಯೋ ಕಾಲ್ ಮಾಡಿ, ಕೊಟ್ಟ ಶಿಕ್ಷೆಯನ್ನ ತೋರಿಸಿದ್ದಾನೆ. ಅವರೆಲ್ಲ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಅವರ ಜೊತೆಯೂ ದುರಹಂಕಾರದಿಂದ ವರ್ತಿಸಿದ್ದ ಈ ಮನ್ವೀರ್ ಸಿಂಗ್, ಅವರಿಗೆ 35 ಸಾವಿರ ರೂಪಾಯಿ ತನ್ನ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವಂತೆ ಹೇಳಿದ್ದಾನೆ. ಇಲ್ಲವಾದಲ್ಲಿ ಆ ಬಾಲಕನನ್ನ ಕೊಲೆ ಮಾಡುವುದಾಗಿ ಹೇಳಿದ್ದಾನೆ. ಮನ್ವೀರ್ ಸಿಂಗ್ ಏನು ಮಾಡಲು ಹಿಂಜರಿಯಲಾರ ಎಂದು ಮಿಥ್ಲೈಶ್ ಪಾಲಕರು ಸಾಲ ಮಾಡಿ 35 ಸಾವಿರ ರೂಪಾಯಿ ಆತನ ಖಾತೆಗೆ ಜಮಾ ಮಾಡಿದ್ದಾರೆ.
ಕೊನೆಗೆ ಅವರೆಲ್ಲ ಮಗನನ್ನ ಅಲ್ಲಿಂದ ಕರೆದೊಯ್ದಿದ್ದಾರೆ. ಆಗ ಮನ್ವೀರ್ ಸಿಂಗ್ ಹೊಡೆದ ಏಟಿಗೆ ಮಿಥ್ಲೈಶ್ ಮೂಗು ಬಾಯಿಯಿಂದ ರಕ್ತ ಸೋರುತ್ತಿತ್ತು. ಬಳಿಕ ಅವರೆಲ್ಲ ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ, ನಡೆದಿದ್ದ ಘಟನೆಯನ್ನ ವಿವರಿಸಿದ್ದಾರೆ. ದೂರು ದಾಖಲಾದ ತಕ್ಷಣ ಪೊಲೀಸರು ಮನ್ವೀರ್ ಸಿಂಗ್ ನನ್ನ ಬಂಧಿಸಿದ್ದಾರೆ. ಅಸಲಿಗೆ ಈ ಗ್ರಾಮದ ಪಂಚಾಯ್ತಿ ಕಚೇರಿಯಲ್ಲಿ ಅಮರ್‌ಜೀತ್ ಅನ್ನುವ ವ್ಯಕ್ತಿ 35 ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದ. ಮಿಥ್ಲೈಶ್ ಕೂಡ ಅಮರ್‌ಜೀತ್ ಗ್ರಾಮದವನು ಅನ್ನುವ ವಿಚಾರ ಮನ್ವೀರ್ ಸಿಂಗ್‌ಗೆ ಗೊತ್ತಾದ ತಕ್ಷಣ ಪಾಲಕ್‌ಡಿಮ್‌ನಲ್ಲಿರುವ ಜಮೀನಿಗೆ ಮಿಥ್ಲೈಶನ್‌ನನ್ನ ಕರೆದುಕೊಂಡು ಹೋಗಿ ಈ ರೀತಿ ಶಿಕ್ಷ ಕೊಟ್ಟಿದ್ದಾನೆ. ಒಟ್ಟಿನಲ್ಲಿ ಯಾರದ್ದೋ ತಪ್ಪು, ಇನ್ಯಾರಿಗೂ ಶಿಕ್ಷೆ ಅನ್ನುವ ಹಾಗಾಗಿದೆ ಈ ಘಟನೆ.
https://twitter.com/NikhilCh_/status/1680925852220137472?ref_src=twsrc%5Etfw%7Ctwcamp%5Etweetembed%7Ctwterm%5E1680925852220137472%7Ctwgr%5E8cfd4e39501c38c14516c3b491249313f1f58e76%7Ctwcon%5Es1_&ref_url=https%3A%2F%2Fwww.freepressjournal.in%2Findia%2Fpunjab-sarpanch-hangs-bihar-migrant-labourer-from-tree-calls-parents-and-demands-money-held-after-video-goes-viral