7 ವರ್ಷದ ಬಾಲಕಿಯನ್ನ ಮಲತಾಯಿ ಅಪಹರಿಸಿ ಹತ್ಯೆ ಮಾಡಿರೋ ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ. ರಾಂಪುರ ಗ್ರಾಮದಲ್ಲಿ 7 ವರ್ಷದ ಬಾಲಕಿ ಅಭಿರಾಜ್ ಜೋತ್ ಕೌರ್ ಎಂದು ಗುರುತಿಸಲಾದ ಅಪ್ರಾಪ್ತೆಯನ್ನು ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ಕೆಲವರು ಅಪಹರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಬಾಲಕಿಯ ಮಲತಾಯಿ ಆಕೆಯ ಶವವನ್ನು ಬಕೆಟ್ ನಲ್ಲಿ ತೆಗೆದುಕೊಂಡು ಹೋಗ್ತಿರುವುದು ಪತ್ತೆಯಾಗಿದೆ.
ಪತ್ರಕರ್ತ ನಿಖಿಲ್ ಚೌಧರಿ ಅವರು ಟ್ವಿಟರ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
ಮೇ 15 ರಂದು, ಅಮೃತಸರದ ಗರಿಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ 7 ವರ್ಷದ ಬಾಲಕಿ ಕಾಣೆಯಾದ ಪ್ರಕರಣ ವರದಿಯಾಗಿತ್ತು. ಟ್ಯೂಷನ್ ಗೆಂದು ಮನೆಯಿಂದ ಹೋದ ಬಾಲಕಿ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಬಾಲಕಿಯನ್ನು ಹುಡುಕಲಾರಂಭಿಸಿದ್ದಾರೆ. ಅವರ ಪ್ರಯತ್ನಗಳು ವಿಫಲವಾದಾಗ ಅವರು ಸಹಾಯಕ್ಕಾಗಿ ಪೊಲೀಸ್ ಠಾಣೆಗೆ ಧಾವಿಸಿದರು.
ಪೊಲೀಸರು ಗ್ರಾಮದ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಮಹಿಳೆ ಹಾಗೂ ಮತ್ತೊಬ್ಬರು ಹೇಳಿದ ಮೇಲೆ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಹುಡುಗಿಯ ಮಲತಾಯಿ ಜ್ಯೋತಿ ಎಂಬ ಮಹಿಳೆ ತನ್ನ ಮಲಮಗಳನ್ನು ಬಕೆಟ್‌ನಲ್ಲಿ ಹಾಕಿ ಗ್ರಾಮದ ಹಳ್ಳಕ್ಕೆ ಎಸೆದಿರುವುದು ಕಂಡುಬಂದಿದೆ. ಪ್ರಕರಣ ಬಹಿರಂಗಗೊಂಡ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
#UPDATE: The 7-year-old girl who was abducted yesterday from Rampura village in #Amritsar, was killed by her step mother and was also seen in the CCTV footage taking the girl child body carried away in a bucket. https://t.co/3D2vvLdSpe pic.twitter.com/qzcYOFr6DC
— Nikhil Choudhary (@NikhilCh_) May 17, 2023