ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬೀದಿನಾಯಿಗಳ ಮೇಲೆ ಅತ್ಯಚಾರವೆಸಗಿದ ಆರೋಪದಲ್ಲಿ ಕರ್ನಾಟಕ್ ಮೂಲದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮೂಲದ ಕಾರ್ಮಿಕ ಮಲ್ಲಪ್ಪ ಹೊಸಮನಿ ವಿರುದ್ಧ ಪುಣೆಯ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ. ಪುಣೆಯಲ್ಲಿ ಕೆಲ ದಿನಗಳಿಂದ ಬೀದಿನಾಯಿಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕರ್ನಾಟಕ ಮೂಲದ ಕರಮಿಕನೊಬ್ಬ ಈ ಹೇಯ ಕೃತ್ಯವೆಸಗುತ್ತಿದ್ದಾನೆ ಎಂದು ಆರೋಪಿಸಿ ಅನಿಮಲ್ ಹೆವನ್ ಎಂಬ ಸಂಸ್ಥೆಯ ಸದಸ್ಯರಾದ ರಾಗಿಣಿ ಮೋರ್, ಮೃದುಲಾ ವಾಘ್ಮೋರೆ ಸೇರಿದಂತೆ ಕೆಲ ಸದಸ್ಯರು ಔಪಚಾರಿಕವಾಗಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕ ಮಲ್ಲಪ್ಪ ಹೊಸಮನಿ (35), ಟಿಂಗ್ರೆ ನಗರದಲ್ಲಿ ಬೀದಿನಾಯಿಗಳನ್ನು ಟಿನ್ ಶೆಡ್ ಗೆ ಕರೆದೊಯ್ದು ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಘಟನೆ ಗಮನಿಸಿದ ವ್ಯಕ್ತಿಯೊಬ್ಬರು ಎನ್ ಜಿಒ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಸಿಸಿಕ್ಯಾಮರಾ ಪರಿಶೀಲಿಸಿದಾಗ ಆರೋಪಿ ಬಲವಂತವಾಗಿ ಬೀದಿನಾಯಿಗಳನ್ನು ಶೆಡ್ಗೆ ಕರೆದೊಯ್ದು ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಆತ ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಕಾರ್ಯಕರ್ತೆ ರಾಗಿಣಿ ಮೋರ್ ಆರೋಪಿಸಿದ್ದಾರೆ.
ಪ್ರಾಣಿಗಳ ಮೇಲಿನ ದೌರ್ಜನ್ಯ, ಕ್ರೌರ್ಯ ತದೆ ಕಾಯ್ದೆಯಡಿ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.