HomeBusinessLPG ಸಿಲಿಂಡರ್ ದರ ಭಾರಿ ಇಳಿಕೆ: ಬಿಪಿಎಲ್ ಕಾರ್ಡ್ ದಾರರಿಗೆ 700 ರೂ., ಇತರರಿಗೆ 350...

LPG ಸಿಲಿಂಡರ್ ದರ ಭಾರಿ ಇಳಿಕೆ: ಬಿಪಿಎಲ್ ಕಾರ್ಡ್ ದಾರರಿಗೆ 700 ರೂ., ಇತರರಿಗೆ 350 ರೂ. ಕಡಿತ: ಸಬ್ಸಿಡಿ ಘೋಷಿಸಿದ ಪುದುಚೇರಿ ಸರ್ಕಾರ

ಪುದುಚೇರಿ: ಪುದುಚೇರಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. ಗೃಹ ಬಳಕೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 350 ರೂ.ಗಳ ಸಬ್ಸಿಡಿಯನ್ನು ಪಡೆಯಲಿದ್ದು, ಬಿಪಿಎಲ್ ಗ್ರಾಹಕರು 700 ರೂ.ಗಳ ಸಬ್ಸಿಡಿ ಪಡೆಯಲು ಅರ್ಹರಾಗಿದ್ದಾರೆ.

ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ಪುದುಚೇರಿ ಆಡಳಿತ ಎರಡೂ ಸಬ್ಸಿಡಿಗಳನ್ನು ಘೋಷಿಸಿದೆ.

ಪುದುಚೇರಿ ಸರ್ಕಾರ ಹಳದಿ ಪಡಿತರ ಚೀಟಿದಾರರಿಗೆ ಪ್ರತಿ ಸಿಲಿಂಡರ್‌ಗೆ ರೂ 150 ರೂ. ಮತ್ತು ಕೆಂಪು ಪಡಿತರ ಚೀಟಿ ಹೊಂದಿರುವವರಿಗೆ ಸಿಲಿಂಡರ್‌ಗೆ 300 ರೂ. ವಾರ್ಷಿಕವಾಗಿ ಗರಿಷ್ಠ 12 ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಕೇಂದ್ರವು ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಬ್ಸಿಡಿಯನ್ನು ಘೋಷಿಸಿದೆ.

ಇದಲ್ಲದೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಈಗಾಗಲೇ 200 ರೂ. ಸಬ್ಸಿಡಿಯನ್ನು ಪಡೆಯುತ್ತಾರೆ. ಈಗ 200 ರೂ. ಹೆಚ್ಚುವರಿ ಸಬ್ಸಿಡಿ ಒಟ್ಟು 400 ರೂ. ಸಬ್ಸಿಡಿ ಪಡೆಯಲಿದ್ದಾರೆ.

ಆದ್ದರಿಂದ, ಪುದುಚೇರಿಯಲ್ಲಿ 1,115 ರೂಪಾಯಿಗಳ ಬೆಲೆಯ 14.2-ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ ಹಳದಿ ಕಾರ್ಡ್ ಹೊಂದಿರುವವರಿಗೆ 765 ರೂ. ಮತ್ತು ರೆಡ್ ಕಾರ್ಡ್ ಹೊಂದಿರುವವರಿಗೆ 415 ರೂ.ಆಗಿದೆ.

ಅಡುಗೆ ಅನಿಲದ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡುವ ಕೇಂದ್ರ ಸರ್ಕಾರದ ಘೋಷಣೆಯನ್ನು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular