HomeKarnatakaಸಾರ್ವಜನಿಕರೇ ಗಮನಿಸಿ : ಆರೋಗ್ಯ ಕೇಂದ್ರಗಳಲ್ಲಿ ʻಬಯೋಮೆಟ್ರಿಕ್ʼ ಮೂಲಕವೂ ʻಆಯುಷ್ಮಾನ್ ಕಾರ್ಡ್ʼ ಪಡೆಯಬಹುದು

ಸಾರ್ವಜನಿಕರೇ ಗಮನಿಸಿ : ಆರೋಗ್ಯ ಕೇಂದ್ರಗಳಲ್ಲಿ ʻಬಯೋಮೆಟ್ರಿಕ್ʼ ಮೂಲಕವೂ ʻಆಯುಷ್ಮಾನ್ ಕಾರ್ಡ್ʼ ಪಡೆಯಬಹುದು

ಬೆಂಗಳೂರು : ವೈದ್ಯಕೀಯ ತಂಡವು ಮನೆ ಮನೆಗೆ ತೆರಳಿ ಅಂಡ್ರಾಯ್ಡ್ ಮೊಬೈಲ್‍ಗಳ ಮೂಲಕ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಕಾರ್ಡ್‍ಗಳನ್ನು ಸೃಜನೆ ಮಾಡಿಕೊಡುತ್ತಿದ್ದು, ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕವೂ ಕಾರ್ಡ್‍ಗಳನ್ನು ಸೃಜನೆ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ಸಾರ್ವಜನಿಕರು ತಮ್ಮ ಅಂಡ್ರಾಯ್ಡಡ ಮೊಬೈಲ್‍ಗಳ ಮೂಲಕ ಮತ್ತು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯೊಂದಿಗೆ ನೋಂದಣಿ ಮಾಡಿಕೊಂಡು ಕಾರ್ಡ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.

ಎಬಿ-ಪಿಎಮ್‍ಜೆಎವೈ-ಸಿಎಮ್ ಆರ್‍ಕೆ (ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ) ಎಂಬ ಹೆಸರಿನೊಂದಿಗೆ ದೊರಕುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಆಯುಷ್ಮಾನ್ ಕಾರ್ಡ್‍ಗಳನ್ನು ಸಾರ್ವಜನಿಕರು ತಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಾರ್ಡ್‍ಗಳಿಂದ 1650 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಸುಸಜ್ಜಿತ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವೆಚ್ಚ ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಡ್‍ಗಳನ್ನು ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಮತ್ತು ಆಧಾರ್‍ಕಾರ್ಡ್‍ನೊಂದಿಗೆ ತಮ್ಮ ಮೊಬೈಲ್‍ನಲ್ಲಿಯೇ (ಆಂಡ್ರಾಯ್ಡ್ ಮೊಬೈಲ್)  ನೋಂದಣಿ ಮೂಲಕ ಕಾರ್ಡ್‍ಗಳನ್ನು ಪಡೆಯಬಹುದು.

ನೋಂದಣಿ ಮಾಡಿಕೊಳ್ಳುವ ವಿಧಾನ:

ತಮ್ಮ ಮೊಬೈಲ್‍ನ ಗೂಗಲ್ ವೆಬ್‍ಸೈಟ್‍ನಲ್ಲಿ http://beneficiary.nha.gov.in ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಂಡು ಬರುತ್ತದೆ. ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್‍ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು. ಒಟಿಪಿ ನೊಂದಾಯಿಸಿ ಸಬ್‍ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ಪೊರ್ಟಲ್ ಒಪನ್ ಆಗುತ್ತದೆ. ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ಎನ್ನುವಲ್ಲಿ ತಮ್ಮ ಮೂಲ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲೈಮ್‍ಟೈಪ್ ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.

ಈಗಾಗಲೇ ಎಬಿ.ಪಿ.ಎಮ್.ಜೆ.ವೈ-ಸಿಎಮ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಬೇರೆ ಯಾವುದಾದರೂ ಯೋಜನೆಗೆ ನೋಂದಣಿ  (ಇ-ಕೆವೈಸಿ) ಲಿಂಕ್ ಮಾಡಿಕೊಂಡಿದ್ದರೆ ನೇರವಾಗಿ ಪೊರ್ಟಲ್‍ನಲ್ಲಿ ಕಾರ್ಡ್ ಜನರೇಷನ್ ವೆರಿಪೈ ಎಂದು ಕಂಡು ಬರುತ್ತದೆ. ಒಂದು ವೇಳೆ ಬೇರೆ ಯಾವುದಾದರು ಯೋಜನೆಗೆ ಕಾರ್ಡ್ ಅನ್ನು ನೋಂದಣಿ ಮಾಡದೇ ಇದ್ದರೆ (ನಿಮ್ಮ ಇ-ಕೆವೈಸಿ ಹೊಂದಿಲ್ಲದಿದ್ದರೆ) ಆಧಾರ್ ಒಟಿಪಿ ಮುಖಾಂತರ ಇ-ಕೆವೈಸಿ ಮಾಡಿಕೊಂಡು ಕಾರ್ಡ್‍ನ್ನು ಪಡೆಯಬಹುದಾಗಿದೆ.

ಅತೀ ಮುಖ್ಯವಾಗಿ ಆಯುಷ್ಮಾನ್ ಭವಃ ಕಾರ್ಡ್ ಪಡೆಯಲು ಪ್ರತಿ ಕುಟುಂಬವು ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ತಪ್ಪದೇ ಹೊಂದಿರಬೇಕು. ರೇಷನ್ ಕಾರ್ಡ್‍ಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಸಾರ್ವಜನಿಕರು ತಮ್ಮ ಸ್ಮಾರ್ಟ್ ಮೊಬೈಲ್‍ಗಳ ಮೂಲಕ ಯಾವುದೇ ವೆಚ್ಚವಿಲ್ಲದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭವಃ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದಾಗಿದೆ. ತಾಂತ್ರಿಕವಾಗಿ ಯಾವುದೇ ತೊಂದರೆ ಕಂಡುಬಂದಲ್ಲಿ ಸಹ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular