HomeKarnatakaಸಾರ್ವಜನಿಕರೇ ರಾಜ್ಯ ಮಟ್ಟದ 'ಪತ್ರ ಬರೆಯುವ ಸ್ಪರ್ಧೆ'ಯಲ್ಲಿ ಭಾಗವಹಿಸಿ, ಆಕರ್ಷಕ 'ಬಹುಮಾನ' ಗೆಲ್ಲಿ.!

ಸಾರ್ವಜನಿಕರೇ ರಾಜ್ಯ ಮಟ್ಟದ ‘ಪತ್ರ ಬರೆಯುವ ಸ್ಪರ್ಧೆ’ಯಲ್ಲಿ ಭಾಗವಹಿಸಿ, ಆಕರ್ಷಕ ‘ಬಹುಮಾನ’ ಗೆಲ್ಲಿ.!

ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಪತ್ರ ಬರೆಯಲು ಇರುವ ವಿಷಯ ‘ದಿ ಜಾಯ್ ಆಫ್ ರೈಟಿಂಗ್: ಇಂರ್ಪಾಟೆಂಟ್ಸ್ ಆಪ್ ಲೆಟರ್ಸ್ ಇನ್ ಎ ಡಿಜಿಟಲ್ ಏಜ್’.ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್ವಲಪ್ಗಳನ್ನು ಉಪಯೋಗಿಸತಕ್ಕದ್ದು.

ಇನ್ಲ್ಯಾಂಡ್ ಲೆಟರ್ ಕಾರ್ಡ್ (ಐಎಲ್ಸಿ) ಉಪಯೋಗಿಸುವವರು 500 ಪದಗಳಿಗೆ ಮೀರದಂತೆ ಮತ್ತು ಎನ್ವಲಪ್ ಉಪಯೋಗಿಸುವವರು 1000 ಪದಗಳಿಗೆ ಮೀರದಂತೆ ಎ4 ಶೀಟ್ನಲ್ಲಿ ಬರೆದು ಎನ್ವಲಪ್ ಒಳಗೆ ಹಾಕಿ ಕಳುಹಿಸಬೇಕು. ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು.

ಸ್ಪರ್ಧೆಗೆ ಉಪಯೋಗಿಸಿದ ಐಎಲ್ಸಿ/ಎನ್ವಲಪ್ ಮೇಲೆ ಸೂಪರ್ಡೆಂಟ್ ಆಪ್ ಪೋಸ್ಟ್ ಆಫಿಸಸ್, ಕೊಡಗು ಡಿವಿಜನ್-571201 ‘ಪತ್ರ ಬರೆಯುವ ಸ್ಪರ್ಧೆ’ ಎಂದು ವಿಳಾಸ ಬರೆದು ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ನಂತರ ಐಎಲ್ಸಿ/ಎನ್ವಲಪ್ ಅನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. ನಿಮ್ಮ ಪತ್ರ ನಮ್ಮ ಕಚೇರಿಗೆ ತಲುಪಲು ಡಿಸೆಂಬರ್, 14 ಕೊನೆಯ ದಿನವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸ್ಪರ್ಧೆಯಲ್ಲಿ 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ವರ್ಗ ಎಂದು ಎರಡು ವಿಭಾಗದಲ್ಲಿ ನಡೆಸಲಾಗುವುದು. ಕರ್ನಾಟಕ ವೃತ್ತ ಮಟ್ಟದ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ರೂ.25 ಸಾವಿರ, ಎರಡನೇ ಬಹುಮಾನ ರೂ.10 ಸಾವಿರ, ಮೂರನೇ ಬಹುಮಾನ ರೂ.5 ಸಾವಿರ.ಹಾಗೆಯೇ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಮೊದಲ ವಿಜೇತರಿಗೆ ರೂ.50 ಸಾವಿರ, ಎರಡನೇ ವಿಜೇತರಿಗೆ ರೂ.25 ಸಾವಿರ ಮತ್ತು ತೃತೀಯ ಬಹುಮಾನ ರೂ.10 ಸಾವಿರ ನಗದು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ www.karnatakapost.gov.in ನ್ನು ಸಂಪರ್ಕಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular