HomeKarnatakaBREAKING: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 1200 ಪಿಎಸ್ಐ, 12 ಸಾವಿರ ಪೊಲೀಸರ...

BREAKING: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 1200 ಪಿಎಸ್ಐ, 12 ಸಾವಿರ ಪೊಲೀಸರ ನೇಮಕಾತಿ

ಕಲಬುರಗಿ: ರಾಜ್ಯದಲ್ಲಿ ಆರರಿಂದ ಏಳು ತಿಂಗಳಲ್ಲಿ 1200 ಪಿಎಸ್ಐ ಗಳ ನೇಮಕಾತಿ ಮಾಡಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಯ ಕೊರತೆ ಇದೆ. ರಾಜ್ಯದಲ್ಲಿ ಅದನ್ನು ಕೂಡ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

6-7 ತಿಂಗಳಲ್ಲಿ 1200 ಪಿಎಸ್ಐಗಳ ನೇಮಕಾತಿ ನಡೆಸಲಿದ್ದು, ರಾಜ್ಯದಲ್ಲಿ 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಯ ಕೊರತೆ ಇದ್ದು, ಅವನ್ನು ಕೂಡ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುತ್ತಾರೆ. ಅಂತಹ ಒಂದು ಉದಾರಣೆ ಕೊಡಿ ಎಂದು ಪರಮೇಶ್ವರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮ್ಮನೆ ಜನರಲ್ ಆಗಿ ಆರೋಪಗಳನ್ನು ಮಾಡಬಾರದು. ಅವರ ಕಾಲದಲ್ಲಿ ಎಷ್ಟು ಆಗಿದೆ ಎನ್ನುವ ದಾಖಲೆ ಇದೆ. ಅದನ್ನು ಸಮಯ ಬಂದಾಗ ನಾವು ಬಿಡುಗಡೆ ಮಾಡುತ್ತೇವೆ. 48 ಗಂಟೆಗಳಲ್ಲಿ ಮಂಗಳೂರು ದರೋಡೆ ಪ್ರಕರಣ ಕೇಸ್ ಭೇಧಿಸಿದ್ದೇವೆ. ಬೀದರ್ ದರೋಡೆ ಪ್ರಕರಣ ಕೂಡ ಕೊನೆಯ ಹಂತದಲ್ಲಿದೆ. ಆದಷ್ಟು ಬೇಗ ನಮ್ಮ ಪೊಲೀಸರು ಅವರನ್ನು ಬಂಧಿಸುತ್ತಾರೆ ಎಂದು ಹೇಳಿದ್ದಾರೆ.

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ

ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಸ್ಟರ್ ಡ್ಯಾಶ್ ಬೋರ್ಡ್ ಅನ್ನು ಗೃಹ ಸಚಿವ ಜಿ. ಪರಮೇಶ್ವರ್ ಉದ್ಘಾಟಿಸಿದ್ದಾರೆ.

ಕಲಬುರಗಿಯ ಎಲ್ಲಾ ಠಾಣಾ ವ್ಯಾಪ್ತಿಯ ನೇರ ದೃಶ್ಯ ಒಂದೇ ಕಡೆ ಲಭ್ಯವಾಗಲಿದೆ. ಕಲಬುರಗಿ ನಗರ ವ್ಯಾಪ್ತಿಯಲ್ಲಿ 113 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನಲ್ಲಿಯೂ ಈ ವ್ಯವಸ್ಥೆಯನ್ನು ಮಾಡುವ ಯೋಜನೆ ಇದೆ. ಅದಕ್ಕೂ ಮೊದಲೇ ಕಲಬುರಗಿಯಲ್ಲಿ ಅನುಷ್ಠಾನ ಮಾಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular