HomeKarnatakaಪಿಎಸ್ಐ ಪರಶುರಾಮ್ ಸಾವಿಗೆ ಕಾರಣರಾದ ಶಾಸಕ, ಪುತ್ರನನ್ನು ಬಂಧಿಸಿ ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ...

ಪಿಎಸ್ಐ ಪರಶುರಾಮ್ ಸಾವಿಗೆ ಕಾರಣರಾದ ಶಾಸಕ, ಪುತ್ರನನ್ನು ಬಂಧಿಸಿ ಮನೆಗೆ ಬನ್ನಿ: ಗೃಹ ಸಚಿವರಿಗೆ ಕುಟುಂಬಸ್ಥರ ಒತ್ತಾಯ

ಕೊಪ್ಪಳ: ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಮತ್ತು ಅವರ ಪುತ್ರನನ್ನು ಮೊದಲು ಬಂಧಿಸಿ ಬಳಿಕ ಗೃಹ ಸಚಿವರು ನಮ್ಮ ಮನೆಗೆ ಬರಲಿ ಎಂದು ಪರಶುರಾಮ್ ಅವರ ಸಹೋದರ ಹನುಮಂತಪ್ಪ ಛಲವಾದಿ ಒತ್ತಾಯಿಸಿದ್ದಾರೆ.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆಗಸ್ಟ್ 7ರಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭೇಟಿ ನೀಡಲಿದ್ದು, ಪಿಎಸ್ಐ ಪರಶುರಾಮ್ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹನುಮಂತಪ್ಪ ಛಲವಾದಿ ಅವರು, ಪಿಎಸ್ಐ ಪರಶುರಾಮ ಸಾವಿಗೆ ಕಾರಣರಾದವರ ವಿರುದ್ಧ ದೂರು ನೀಡಿದ್ದೇವೆ. ಮೊದಲು ಅವರನ್ನು ಬಂಧಿಸಿ ನಂತರ ನಮ್ಮ ಮನೆಗೆ ಗೃಹ ಸಚಿವರು ಬರಲಿ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular