HomeKarnatakaBIG NEWS: ಪಿಎಸ್ಐ, ಕಾನ್ಸ್ಟೇಬಲ್ ರಿಂದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್; ಕಿರುಕುಳಕ್ಕೆ ನೊಂದು ಎಸ್ ಪಿಗೆ...

BIG NEWS: ಪಿಎಸ್ಐ, ಕಾನ್ಸ್ಟೇಬಲ್ ರಿಂದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್; ಕಿರುಕುಳಕ್ಕೆ ನೊಂದು ಎಸ್ ಪಿಗೆ ದೂರು

ಗದಗ: ಪಿಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಇಬ್ಬರೂ ಕಾಲೇಜು ವಿದ್ಯಾರ್ಥಿನಿಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ ಠಾಣೆಯ ಪಿಎಸ್ಐ ನಿಖಿಲ್ ಕಾಂಬ್ಳೆ ಹಾಗೂ ಕಾನ್ಸ್ಟೇಬಲ್ ಶಂಕರ್ ನಾಲಕರ್ ವಿರುದ್ಧ ವಿದ್ಯಾರ್ಥಿನಿ ಆರೋಪಿಸಿದ್ದು, ಮೊಬೈಲ್ ಗೆ ಕಳುಹಿಸಿರುವ ಮೆಸೇಜ್ ಸಮೇತ ದೂರು ನೀಡಿದ್ದಾಳೆ.

ಕಳೆದ ಒಂದು ವರ್ಷದಿಂದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ನಿರಂತರ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಎಸ್ ಪಿಗೆ ದೂರು ನೀಡುವುದಾಗಿ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ. ಮೊಬೈಲ್ ಗೆ ಕೆಟ್ಟ ಮೆಸೇಜ್ ಕಳುಹಿಸುವುದನ್ನೂ ನಿಲ್ಲಿಸಿಲ್ಲ. ಅಲ್ಲದೇ ವಿದ್ಯಾರ್ಥಿನಿಯ ಹೆಸರು ಕೆಡಿಸುವ ಕೆಲಸವನ್ನೂ ಪೊಲೀಸರಿಬ್ಬರು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೊಂದ ವಿದ್ಯಾರ್ಥಿನಿ ಗದಗ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಪಿಎಸ್ಐ ನಿಖಿಲ್ ಹಾಗೂ ಕಾನ್ಸ್ಟೇಬಲ್ ಶಂಕರ್ ನಾಲಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular