HomeKarnataka'ಆಸ್ತಿ ನೋಂದಣಿ'ಗೆ ಇನ್ಮುಂದೆ 2 ದಿನದಲ್ಲಿ ಸಿಗಲಿದೆ ಇ - ಖಾತಾ : ಬಿಬಿಎಂಪಿ

‘ಆಸ್ತಿ ನೋಂದಣಿ’ಗೆ ಇನ್ಮುಂದೆ 2 ದಿನದಲ್ಲಿ ಸಿಗಲಿದೆ ಇ – ಖಾತಾ : ಬಿಬಿಎಂಪಿ

ಬೆಂಗಳೂರು : ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ಟೋಬರ್ನಲ್ಲಿ ದಿನ ನಿಗದಿಪಡಿಸಿಕೊಂಡವರಿಗಾಗಿ ಒಂದು ಅಥವಾ ಎರಡು ದಿನದಲ್ಲಿ ಇ – ಖಾತಾ ನೀಡಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.

ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದರೆ ಕೂಡಲೇ ಇ – ಖಾತಾ ಮಾಡಿಕೊಡಲು ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಆಸ್ತಿ ನೋಂದಣಿಯ ಉದ್ದೇಶವಿಲ್ಲದವರು ಅಂತಿಮ ಇ-ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಆನ್ಲೈನ್ನಲ್ಲೇ ಯಾವಾಗ ಬೇಕಾದರೂ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಋುಣಭಾರ ಪ್ರಮಾಣಪತ್ರದ (ಇಸಿ) ಅಗತ್ಯವಿಲ್ಲಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular