HomeKarnatakaಆಸ್ತಿ ಮಾಲೀಕರೇ ಗಮನಿಸಿ : ಇ-ಖಾತಾ ಪಡೆಯಲು 'EC' ಬೇಕಾಗಿಲ್ಲ, ಜಸ್ಟ್ ಹೀಗೆ ಮಾಡಿ.!

ಆಸ್ತಿ ಮಾಲೀಕರೇ ಗಮನಿಸಿ : ಇ-ಖಾತಾ ಪಡೆಯಲು ‘EC’ ಬೇಕಾಗಿಲ್ಲ, ಜಸ್ಟ್ ಹೀಗೆ ಮಾಡಿ.!

ಬೆಂಗಳೂರು : ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಹಾಗೂ ಆಸ್ತಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಕ್ರಿಯೆನ್ನು ಸುಲಭಗೊಳಿಸಲಾಗಿದ್ದು, ನಾಗರಿಕರು ಈಗ ಇಸಿ (encumbrance certificate) ಇಲ್ಲದೇ ಅಂತಿಮ ಇ-ಖಾತಾ ಪಡೆಯಬಹುದಾಗಿದೆ.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಬಿಎಂಪಿ ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ (EC) ಪ್ರತಿಯೊಬ್ಬ ನಾಗರಿಕನು ತನ್ನ ಬಿಬಿಎಂಪಿ ಇ-ಖಾತೆ ಯನ್ನು ಸರಾಗವಾಗಿ ಉಚಿತವಾಗಿ ಪಡೆಯಬಹುದಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಮಾಡಿಸಲು ಹೊಸ ವೆಬ್ ಸೈಟ್ ಆರಂಭಿಸಲಾಗಿದ್ದು, ಖಾತೆ ಇಲ್ಲದವರೂ ಸಹ ಇ-ಖಾತಾ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಖಾತಾ ಪಡೆಯೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ಇಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular