BREAKING: ಪಹಣಿಯಿಂದ ವಕ್ಫ್ ಹೆಸರು ತೆಗೆಯುವುದಾಗಿ ಭರವಸೆ: ಹೋರಾಟ ಸ್ಥಗಿತಗೊಳಿಸಿದ ರೈತರು

ವಿಜಯಪುರ: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳ ಸ್ಥಳಕ್ಕೆ ಜಿಲ್ಲಾಧಿಕಾರಿ, ಎಡಿಸಿ, ಎಸ್ಪಿ ಭೇಟಿ ನೀಡಿದ್ದಾರೆ.

ವಿಜಯಪುರ ಡಿಸಿ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿ ಕರಾಳ ದೀಪಾವಳಿ ಆಚರಿಸುತ್ತಿದ್ದು, ಜಿಲ್ಲಾಡಳಿತದಿಂದ ರೈತರ ಮನವೊಲಿಸಲಾಗಿದೆ.

ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಅವರು ರೈತರ ಸಮಸ್ಯೆಯನ್ನು ಆಲಿಸಿದ್ದಾರೆ. ರೈತರ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ತೆಗೆಯುವುದಾಗಿ ಭರವಸೆ ನೀಡಿದ್ದಾರೆ. ಇಂಡಿ ತಾಲೂಕಿನ 41 ರೈತರ ಜಮೀನು ಇಂಡೀಕರಣ ರದ್ದು ಮಾಡಲಾಗಿದೆ. ಈಗಾಗಲೇ ಇಂಡೀಕರಣವನ್ನು ರದ್ದು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕೂಡಲೇ ಹೋರಾಟವನ್ನು ಕೈ ಬಿಡುವಂತೆ ಜಿಲ್ಲಾಡಳಿತ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಧಿಕಾರಿ, ಎಡಿಸಿ ಮತ್ತು ಎಸ್ಪಿ ಮನವಿಗೆ ಸ್ಪಂದಿಸಿ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read