HomeLive Newsಪ್ರೊ ಕಬಡ್ಡಿ: ಇಂದು ಯುಪಿ ಯೋಧಾಸ್ - ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಪ್ರೊ ಕಬಡ್ಡಿ: ಇಂದು ಯುಪಿ ಯೋಧಾಸ್ – ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ ಅಭಿಷೇಕ್ ಬಚ್ಚನ್ ಒಡೆತನದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗುತ್ತಿದ್ದು, ಕಬಡ್ಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಉಭಯ ತಂಡಗಳ ಬಲಾಬಲ ನೋಡುವುದಾದರೆ 12 ಬಾರಿ ಮುಖಮುಖಿಯಾಗಿದ್ದು, ಯುಪಿ ಯೋಧಾಸ್ ಐದು ಬಾರಿ ಜಯ ಕಂಡರೆ, ಜೈಪುರ್ ಪಿಂಕ್ ಪ್ಯಾಂಥರ್ಸ್ ಏಳು ಬಾರಿ ಜಯ ಕಾಣುವ ಮೂಲಕ ಮೇಲುಗೈ ಸಾಧಿಸಿದೆ.

ಯುಪಿ ಯೋಧಾಸ್ ತಂಡದಲ್ಲಿ ಮೂರು ರೈಡರ್ಗಳಿದ್ದರೆ, ಜೈಪುರ್ ನಲ್ಲಿ ಅರ್ಜುನ್ ದೇಸ್ವಾಲ್ ಒಬ್ಬರೇ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಈ ಬಾರಿ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಯುಪಿ ಯೋಧಾಸ್ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಯಾವ ರೀತಿ ಅಬ್ಬರಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular