ಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟನ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿ

ಪ್ರೊ. ಕಬಡ್ಡಿ ಪ್ಲೇ ಆಫ್ ಗೆ ಮೂರು ತಂಡಗಳು ಈಗಾಗಲೇ ಎಂಟ್ರಿ ಕೊಟ್ಟಿದ್ದು, ಯು ಪಿ ಯೋದಾಸ್ ಮತ್ತು ತೆಲುಗು ಟೈಟನ್ಸ್ ಸೇರಿದಂತೆ ಯು ಮುಂಬಾ ಈಗಾಗಲೇ ಹೊರಗುಳಿದಿವೆ ಉಳಿದ ಸ್ಥಾನಕ್ಕಾಗಿ ಆರು ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದು, ಇಂದು  ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಪುಣೇರಿ ಪಲ್ಟನ್ ಮುಖಮುಖಿಯಾಗಲಿವೆ. ತಮಿಳ್ ತಲೈವಾಸ್ಗೆ ತನ್ನ ಪ್ಲೇ ಆಫ್ ಜೀವಂತವಾಗಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿದೆ. ಇಂದು ಅಜಿಂಕ್ಯ ಪವಾರ್ ಹುಟ್ಟುಹಬ್ಬವಾಗಿದ್ದು, ತಮ್ಮ ತಂಡಕ್ಕೆ ಜಯ ತಂದು ಕೊಡಲಿದ್ದಾರ ಕಾದು ನೋಡಬೇಕಾಗಿದೆ.

ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ಸೆಣಸಾಡಲಿದ್ದು, ಐದನೇ ಸ್ಥಾನದಲ್ಲಿರುವ ಗುಜರಾತ್ ಜೆಂಟ್ಸ್ ತಂಡದ ಜೊತೆ ಇಂದು ಬೆಂಗಳೂರು ಬುಲ್ಸ್ ಜಯಭೇರಿ ಆದರೆ ಪ್ಲೇ ಆಫ್ ಆದಿ ಸುಗಮವಾಗಲಿದೆ. ಒಟ್ಟಾರೆ ಎರಡು ಬ್ಲಾಕ್ ಬಸ್ಟರ್ ಪಂದ್ಯಗಳನ್ನು ವೀಕ್ಷಿಸಲು ಕಬಡ್ಡಿ ಅಭಿಮಾನಿಗಳು  ಕಾತುರದಿಂದ ಕಾಯುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read