ಒಳ ಉಡುಪು ನೋಡಲು ಬಯಸಿದ್ದರಂತೆ ನಿರ್ದೇಶಕ; ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ

ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಆಗಾಗ್ಗೆ ಮಾತುಗಳು ಕೇಳಿಬರುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮೀಟೂ ಎಂಬ ಪ್ರಕರಣ ವಿದೇಶದಲ್ಲಿ ಶುರುವಾಗಿದ್ದು ಭಾರತದಲ್ಲೂ ಸದ್ದು ಮಾಡಿತ್ತು.

ಹಲವಾರು ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇದೀಗ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಬಾಲಿವುಡ್ ನಿರ್ದೇಶಕ ತನ್ನ ಒಳ ಉಡುಪುಗಳನ್ನು ನೋಡಲು ಬಯಸಿದ್ದರು ಎಂಬ ಶಾಕಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ತನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಬಾಲಿವುಡ್ ನಿರ್ದೇಶಕರೊಬ್ಬರು ದೃಶ್ಯವನ್ನು ಚಿತ್ರೀಕರಿಸುವಾಗ ತನ್ನ ಒಳ ಉಡುಪು ನೋಡಲು ಬಯಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಜನಪ್ರಿಯ ನಿಯತಕಾಲಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, 2002-03ರಲ್ಲಿ ಸಿನಿಮಾವೊಂದರಲ್ಲಿ ರಹಸ್ಯ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ರಂತೆ. ಸಿನಿಮಾದ ಒಂದು ದೃಶ್ಯದಲ್ಲಿ ಅವರು ಒಬ್ಬ ವ್ಯಕ್ತಿಯನ್ನು ಮೋಹಿಸಬೇಕಾಗಿತ್ತು. ಆ ದೃಶ್ಯವನ್ನು ಮಾಡುವಾಗ, ಒಂದು ತುಂಡು ಬಟ್ಟೆಯನ್ನು ತೆಗೆಯಬೇಕಾಗಿತ್ತು. ಈ ವೇಳೆ ನಿರ್ದೇಶಕರು, ತಾನು ನಟಿಯ ಒಳ ಉಡುಪುಗಳನ್ನು ನೋಡಬೇಕಾಗಿದೆ ಎಂದು ಹೇಳಿದ್ದರಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read