HomeKarnatakaBIG NEWS: ರಾಜಕೀಯ ಮಾಡಬೇಕು ಅಂದ್ರೆ ಲಾಜಿಕ್ ಆಗಿ ಮಾಡಿ: ಸಂಸದ ತೇಜಸ್ವಿ ಸೂರ್ಯಗೆ ಸಚಿವ...

BIG NEWS: ರಾಜಕೀಯ ಮಾಡಬೇಕು ಅಂದ್ರೆ ಲಾಜಿಕ್ ಆಗಿ ಮಾಡಿ: ಸಂಸದ ತೇಜಸ್ವಿ ಸೂರ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಕಾರ್ಯಕ್ರಮದಿಂದಾಗಿಯೇ ಟ್ರಾಫಿಕ್ ಜಾಮ್ ಉಂಟಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಂದ ನಾವು ಏನು ಪಾಠ ಕಲಿಯಬೇಕಾಗಿಲ್ಲ. ಅವರು ನಿಜವಾಗಲೂ ವಿದ್ಯಾರ್ಥಿಗಳ ಪರವಾಗಿದ್ರೆ ಮೊದಲು ಕ್ಷಮೆ ಕೇಳಲಿ ಎಂದರು.

22 ಲಕ್ಷ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ರಲ್ಲ, ಆಗ ಏಕೆ ಮಾತಾಡಲಿಲ್ಲ? 10 ವರ್ಷದಲ್ಲಿ 90 ಪೇಪರ್ ಲೀಕ್ ಪ್ರಕರಣಗಳು ಆಗಿವೆ. ಈವರೆಗೆ ಬಿಜೆಪಿಯವರು ಒಮ್ಮೆಯಾದರೂ ಈ ಬಗ್ಗೆ ಮಾತನಾಡಿದ್ದಾರಾ? ಒಮ್ಮೆಯಾದರೂ ವಿದ್ಯಾರ್ಥಿಗಳು, ಪೋಷಕರಲ್ಲಿ ಕ್ಷಮೆ ಕೇಳಿದ್ದಾರಾ? ಬಿಜೆಯವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಈಗ ಕಾಂಗ್ರೆಸ್ ಕಾರ್ಯಕ್ರಮದಿಂದ ತೊಂದರೆ ಎಂದು ಡ್ರಾಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂವರು ಪರೀಕ್ಷೆಗೆ ಯಾಕೆ ಬರಲಿಕ್ಕೆ ಆಗಿಲ್ಲ ಎಂಬುದನ್ನು ನೋಡಲಿ. ನಿಜವಾದ ಕಾರಣಗಳು ನಾನು ಬಹಿರಂಗವಾಗಿ ಹೇಳಿದ್ದೇನೆ. ಓರ್ವ ಮಾಗಡಿಯಿಂದ ಬರ್ತಿದ್ದು, ಮಾಗಡಿನಲ್ಲಿ ನಮ್ಮ ಕಾರ್ಯಕ್ರಮ ಏನು ಇತ್ತು? ಇನ್ನೊಬ್ಬರು ಪರೀಕ್ಷೆಗೆ ಹಳೆಯ ಹಾಲ್ ಟಿಕೆಟ್ ತಂದಿದ್ದರು. ಮತ್ತೊಬ್ಬರು ಆರ್.ಟಿ ನಗರದಿಂದ ಬರುತ್ತಿದ್ದರು ಎನ್ನಲಾಗಿದೆ. ಇಲ್ಲಿ ಕಾಂಗ್ರೆಸ್ ನಿಂದ ಏನು ತೊಂದರೆಯಾಗಿದೆ? ರಾಜಕೀಯ ಮಾಡಬೇಕು ಅಂದ್ರೆ ಲಾಜಿಕಲ್ ಆಗಿ ರಾಜಕೀಯ ಮಾಡಿ ಎಂದು ತೇಜಸ್ವಿ ಸೂರ್ಯಗೆ ತಿರುಗೇತು ನೀಡಿದರು.

ಮುಂಬೈ, ಪರೇಲಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಗಿಲ್ಲ. ಹಾಗಿದ್ರೆ ಅದಕ್ಕೆ ಮಹಾರಾಷ್ಟ್ರ ಸರ್ಕಾರ ಕಾರಣ ಅಲ್ವಾ? ಪ್ರಶ್ನೆ ಪತ್ರಿಕೆ ಲೀಕ್ ಆದಾಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಕೊಟ್ರಾ? ಈ ಖಾಲಿ ಟ್ರಂಕ್​ಗಳ ಜೊತೆ ಏನು ಮಾತಾಡೋದು ಎಂದು ಹೇಳಿವ ಮೂಲಕ ಕೌಂಟರ್​​ ಕೊಟ್ಟಿದ್ದಾರೆ.


ತೇಜಸ್ವಿ ಸೂರ್ಯ ಹೇಳಿದ್ದೇನು?

ನೀಟ್ ಪರೀಕ್ಷೆ ದಿನವೇ ಕೆಪಿಸಿಸಿಯ ನೂತನ ಅಧ್ಯಕ್ಷ ವಿಧಾನ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​​ ಪದಗ್ರಹಣ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿ.ಕೆ ಹರಿಪ್ರಸಾದ್ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಿಂದಾಗಿ ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ನೀಟ್​​ ಪರೀಕ್ಷೆಯ ದಿನವೇ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿಸೂರ್ಯ ಕಿಡಿ ಕಾರಿದ್ದು, ಹರಿಪ್ರಸಾದ್ ನಿನ್ನೆ ಬದಲು ಇಂದು ಕಾರ್ಯಕ್ರಮ ಮಾಡಬಹುದಿತ್ತು. ಒಂದು ದಿನ ತಡವಾಗಿ ಪದಗ್ರಹಣ ಮಾಡಿ ಸಮಾರಂಭ ಮಾಡಿದ್ದರೆ ಭೂಮಿ ಬಾಯಿ ಬಿಡುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ.

ನೀಟ್ ಪರೀಕ್ಷೆ ಇದೆ ಎಂದು ಗೊತ್ತಿದ್ದೂ ಕೂಡ ಕಾಂಗ್ರೆಸ್ ನಾಯಕರು ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕ್ರಮದಿಂದಾಗಿ ಟ್ರಾಫಿಕ್ ಜಾಅಮ್ ಉಂಟಾಗಿದೆ. ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರದಾಡಿದ್ದಾರೆ. ತಡವಾಗಿ ಬಂದಿದ್ದಕ್ಕೆ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೇ ವಾಪಸ್ ಹೋಗಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಮಕ್ಕಳ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ಮಕ್ಕಳಿಗೂ ಸಮಸ್ಯೆಯಾಗುತ್ತಿರಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ದೊಡ್ಡದಾಗಿ ಭಾಷಣ ಬಿಗಿಯುತ್ತಾರೆ. ನಾವು ಮಕ್ಕಳ ಪರವಾಗಿ ಇದ್ದೇವೆ ಎಂದು ಡ್ರಾಮಾ ಮಾಡುತ್ತಾರೆ. ಈಗಲಾದರೂ ಸಿಎಂ ಇಂತಹ ಕಾರ್ಯಕ್ರಮ ಬಗ್ಗೆ ಗಮನ ಹರಿಸಲಿ. ಪರೀಕ್ಷೆಗಳು ಇದ್ದಾಗ ಜನರಿಗೆ ಸಮಸ್ಯೆ ಆಗದಂತೆ ನಿಯಮ ತರಬೇಕು. ಇಂತಹ ಸಂದರ್ಭಗಳಲ್ಲಿ ಈ ರೀತಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದು. ವಿಐಪಿ ಸಂಸ್ಕೃತಿಯಿಂದ ಟ್ರಾಫಿಕ್ ಸಮಸ್ಯೆ ನಿಯಮ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.‌

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular