HomeLive Newsನಮ್ಮ ದೇಶದಲ್ಲಿ ಶ್ರೀರಾಮ ಲೆಕ್ಕಕೊಡಬೇಕು; ರಾಮನ ಹೆಸರಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಬಾರದೆ? ಪ್ರಿಯಾಂಕ್ ಖರ್ಗೆ...

ನಮ್ಮ ದೇಶದಲ್ಲಿ ಶ್ರೀರಾಮ ಲೆಕ್ಕಕೊಡಬೇಕು; ರಾಮನ ಹೆಸರಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಬಾರದೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ನವದೆಹಲಿ: ಆರ್.ಎಸ್.ಎಸ್ ನೊಂದಣಿ ಹಾಗೂ ಕಾನೂನು ಬದ್ಧತೆ ಬಗ್ಗೆ ಪ್ರಶ್ನಿಸಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕರ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಈನಡುವೆ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದಾ? ಎಂದು ಪ್ರಶ್ನೆ ಮಾಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿ ಮಾತನಾಡಿದರು. ಅಯೋಧ್ಯೆಯಲ್ಲಿ ದೇಣಿಗೆ ವಿಚಾರದಲ್ಲಿ ಹಗರಣ ನಡೆದಿದೆ ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡುವ ಪರಿಸ್ಥಿತಿ ಬಂದಿದೆ. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾಕೆ ಲೆಕ್ಕ ಕೊಡಬಾರದು? ಎಂದು ಪ್ರಶ್ನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿಯವರು ಆರ್‌.ಎಸ್‌.ಎಸ್‌ನ ಆಳು ಮಕ್ಕಳು, ಅವರು ವಿರೋಧ ಮಾಡೇ ಮಾಡ್ತಾರೆ. ಪಾರದರ್ಶಕತೆ ಕೇಳುವುದು ತಪ್ಪಾ? ಪತ್ರದಲ್ಲಿ ತಪ್ಪೇನಿದೆ ಹೇಳಿ? ನಿತ್ಯ ಸಾವಿರಾರು ಶಾಖಾ ಸಭೆಗಳನ್ನ ನಡೆಸಲಾಗುತ್ತಿದೆ. ಆರ್‌ಎಸ್‌ಎಸ್‌ ಮಾಹಿತಿ ನೀಡದಂತೆ ಲಕ್ಷಾಂತರ ಜನರನ್ನ ಸೇರಿಸಿ ಪಂಥಸಂಚಲನ ಮಾಡುತ್ತಿದ್ದಾರೆ. ಅಖಿಲ ಭಾರತ ಪ್ರತಿನಿಧಿ ಸಭಾ ಈ ಮಾಹಿತಿ ನೀಡಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಪಥಸಂಚಲನ ಮಾಡಿದರೆ ಪ್ರಶ್ನೆ ಮಾಡಬಾರದಾ? ಎಂದು ಕೇಳಿದರು.

ಜವಬ್ದಾರಿ ಸ್ಥಾನದಲ್ಲಿ ಕುಳಿತು ನಾನು ಕೇಳುತ್ತಿದ್ದೇನೆ. ಯಾವುದೇ ಧರ್ಮದ ಸಂಘ ಸಂಸ್ಥೆಗಳಾದರೂ ಕಾನೂನು ಅಡಿಯಲ್ಲಿ ಬರಬೇಕು. ಯಾವುದೇ ಕಾರ್ಯಕ್ರಮ ಮಾಡಿದ್ರೂ ಪೊಲೀಸ್ ಅನುಮತಿ ಪಡೆಯಬೇಕು. ಆರ್‌ಎಸ್‌ಎಸ್ ಪಡೆಯುವುದು ತಪ್ಪಾ? ನಿಮ್ಮ ಆಡಳಿತ ಸಿಬ್ಬಂದಿ ಯಾರು ಎಂದು ತಿಳಿದುಕೊಳ್ಳಬಾರದಾ? ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ ಎಷ್ಟು ಬರ್ತಿದೆ? ಇದೆಲ್ಲಾ ಕೇಳಬಾರದಾ? ಆರ್‌ಎಸ್‌ಎಸ್‌ನವರು ಕಾನೂನು ಹೋರಾಟಕ್ಕೆ ಮೂರು ಕೋಟಿ ಖರ್ಚು ಮಾಡಿದ್ದಾರೆ. ಸಂಘದ ನಾಯಕರು ಅಮೆರಿಕ ಪ್ರವಾಸ ಮಾಡುತ್ತಾರೆ. ಅವರಿಗೆ ಹಣ ಎಲ್ಲಿಂದ ಬರ್ತಿದೆ? ಅವರ ಚಟುವಟಿಕೆಗಳು ಏನು? ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

ಸಫಾಯಿ ಕರ್ಮಚಾರಿಗೂ ನೊಂದಣಿ ಬೇಕು, ಇವರಿಗೆ ನೋಂದಣಿ ಯಾಕೆ ಇಲ್ಲ? ಎಲ್ಲದಕ್ಕೂ ಧರ್ಮ ಅಡ್ಡ ತರ್ತಾರೆ, ನಾನು ಎಲ್ಲಿ ಧರ್ಮ ಉಲ್ಲೇಖಿಸಿದ್ದೇನೆ? ನನ್ನ ಪತ್ರದಲ್ಲಿ ಹಿಂದೂ ಅನ್ನೊ ಪದ ಎಲ್ಲಿದೆ? ಕೆಲವು ಕಡೆ ನನ್ನ ಪತ್ರಕ್ಕೆ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಅವರು ಇನ್ನು ಉತ್ತರ ನೀಡಿಲ್ಲ ಮೋಹನ್ ಬಾಗವತ್ ಅವರು ಜೂನ್ 13 ರಂದು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ನಾನು ನಿನ್ನೆ ಪತ್ರ ಬಿಡುಗಡೆ ಮಾಡಿದ್ದೇನೆ. ಅದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ, ಹಾಗಿದ್ದಾಗ ಅದು ಉತ್ತರ ಹೇಗೆ ಆಗಲು ಸಾಧ್ಯ? ನಾನು ಧರ್ಮಕ್ಕೆ ನೋಂದಣಿ ಕೇಳ್ತಿಲ್ಲ, ಸಂಘಕ್ಕೆ ಕೇಳ್ತಿದ್ದೇನೆ ಅವರು ಉತ್ತರಿಸಲಿ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular