HomeLatest NewsBREAKING: : ದಸರಾಗೂ ಮೊದಲೇ ಆರ್.ಅಶೋಕ್ ಚೇಂಜ್ ಆಗಬಹುದು; ವಿಪಕ್ಷ ನಾಯಕನಾಗಿ ಅವರಿರುವುದೇ ಅನುಮಾನ: ಸಚಿವ...

BREAKING: : ದಸರಾಗೂ ಮೊದಲೇ ಆರ್.ಅಶೋಕ್ ಚೇಂಜ್ ಆಗಬಹುದು; ವಿಪಕ್ಷ ನಾಯಕನಾಗಿ ಅವರಿರುವುದೇ ಅನುಮಾನ: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ದಸರಾಗೂ ಮೊದಲು ಹೊಸ ಸಿಎಂ ಬರ್ತಾರೆ. ಈ ಬಾರಿ ಹೊಸ ಸಿಎಂ ದಸರಾ ಆಚರಣೆ ಮಾಡುತ್ತಾರೆ. ಸಿದ್ದರಾಮಯ್ಯ ಬದಲಾವಣೆ ಖಚಿತ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ದಸರಾಗೂ ಮೊದಲೇ ಆರ್ ಅಶೋಕ್ ಅವರೇ ಚೇಂಜ್ ಆಗಬಹುದು. ನನಗ್ಯಾಕೋ ಅಶೋಕ್ ಅವರೇ ಚೇಂಜ್ ಆಗ್ತಾರೆ ಅನಿಸುತ್ತಿದೆ. ದಸರಾ ನೋಡಲು ಆರ್. ಅಶೋಕ್ ವಿಪಕ್ಷ ನಾಯಕನಾಗಿ ಇರುವುದು ಅನುಮಾನ. ನಾವು ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಹಾಕಲು ಅಶೋಕ್ ಅವರು ವಿಪಕ್ಷ ನಾಯಕನ ಸ್ಥಾನದಲ್ಲಿ ಇರ್ತಾರ ಇಲ್ವಾ ಎಂಬುದೇ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿಯವರಿಗೆ ಅವರ ಭವಿಷ್ಯವೇ ಗೊತ್ತಾಗುತ್ತಿಲ್ಲ, ಇನ್ನು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿಯೇ ಭಾರಿ ಬದಲಾವಣೆಗಳು ಆಗುತ್ತಿವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular