ಬೆಂಗಳೂರು: ಬಿಜೆಪಿ ನಾಯಕರಿಗೆ ನಮ್ಮನ್ನು ಬೈಯ್ಯುವುದೇ ಒಂದು ಕೆಲಸ. ಅವರು ನಮ್ಮನ್ನು ಬೈಯ್ಯುವುದರಿಂದಲೇ ಅವರುಗೆ ಅವರ ಕುರ್ಚಿ ಸೇಫ್ ಆಗಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ನಮ್ಮನ್ನು ಬೈಯ್ಯುವುದೇ ಒಂದು ಕೆಲಸ. ನಮ್ಮನ್ನು ಆ ಪ್ರಾಣಿ, ಈ ಪ್ರಾಣಿ ಎಂದು ಬಾಯಿಗೆ ಬಂದಂತೆ ಮಾತನಾಡಿ ಬಳಿಕ ಅದನ್ನು ಸಮರ್ಥನೆ ಮಾಡಿಕೊಳ್ಳುವುದೇ ಒಂದು ದೊಡ್ದ ಕೆಲಸ, ನಮ್ಮನ್ನು ಬೈದ ಬಗ್ಗೆ ಅವರು ಕೇಶವ ಕೃಪಾಗೆ ಹೋಗಿ ವರದಿ ಕೊಡುತ್ತಾರೆ. ಆಗ ಅವರ ಕುರ್ಚಿ ಭದ್ರವಾಗಿರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಿಂದ ಆರ್ ಎಸ್ ಎಸ್ ಸೇಫ್ ಮಾಡುವ ಪ್ರಯತ್ನ ನಡೆದಿದೆ. ಈ ಹಿಂದೆ ಆರ್ ಎಸ್ ಎಸ್ ಬ್ಯಾನ್ ಮಾಡಲಾಗಿತ್ತು. ಈಗ ಬಿಜೆಪಿ ನಾಯಕರಿಂದ ಆರ್ ಎಸ್ ಎಸ್ ನ್ನು ಸೇಫ್ ಮಾಡುವ ಕೆಲಸ ನಡೆದಿದೆ ಎಂದು ಕಿಡಿಕಾರಿದರು.