ಕಾಂಗ್ರೆಸ್ ನಾಯಕರು ವಿಬಿ-ಜಿ ರಾಮ್-ಜಿ ಕಾಯ್ದೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮಹಾತ್ಮ ಗಾಂಧಿ ಹೆಸರನ್ನು ತೆಗೆದಿರುವುದು ಸೇರಿದಂತೆ ವಿವಿಧ ಕಾರಣಕ್ಕೆ ಯೋಜನೆ ವಿರುದ್ಧ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.
ಕರ್ನಾಟಕದಲ್ಲಿ ವಿಬಿ-ಜಿ ರಾಮ್-ಜಿ ಕಾಯ್ದೆಯ ವಿರುದ್ಧ ಚರ್ಚೆ ಮಾಡಲು ವಿಶೇಷ ವಿಧಾನಸಭೆ ಅಧಿವೇಶನವನ್ನು ಮಾಡಿ, ಯೋಜನೆ ವಿರುದ್ಧ ನಿರ್ಣಯವನ್ನು ಮಂಡನೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿಬಿ-ಜಿ ರಾಮ್-ಜಿ ಕಾಯ್ದೆಯು ಹೇಗೆ ರಾಜ್ಯಗಳ ಮೇಲೆ ವೆಚ್ಚವನ್ನು ಹಾಕಲಿದೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಸಚಿವರ ಪೋಸ್ಟ್: ಸಚಿವರು ತಮ್ಮ ಪೋಸ್ಟ್‌ನಲ್ಲಿ 8.65 ಕೋಟಿ ಸಕ್ರಿಯ ಉದ್ಯೋಗ ಕಾರ್ಡ್‌ಗಳು. ಕೇಂದ್ರ ಸರ್ಕಾರವು ದಿನಕ್ಕೆ ₹355 ಮೊತ್ತದ ಕನಿಷ್ಠ ವೇತನದಲ್ಲಿ 125 ದಿನಗಳ “ಖಾತರಿ”ಯನ್ನು ಗಂಭೀರವಾಗಿ ಪರಿಗಣಿಸಿದರೆ, ಸರ್ಕಾರದ ವೆಚ್ಚ ₹3.83 ಲಕ್ಷ ಕೋಟಿಯಾಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಅನುದಾನ ಹಂಚಿಕೆಯಲ್ಲಿ, ಕೇಂದ್ರದ ಪಾಲು ಮಾತ್ರವೇ ₹ 2.3 ಲಕ್ಷ ಕೋಟಿಯಷ್ಟಿದೆ. ಆದರೆ ಕೇಂದ್ರ ಬಜೆಟ್ ಕೇವಲ ₹95,000 ಕೋಟಿಗಳನ್ನು (ಕಳೆದ ವರ್ಷದ ಪಾವತಿಗಳನ್ನು ಒಳಗೊಂಡಂತೆ) ಮೀಸಲಿಟ್ಟಿದೆ. ಮತ್ತು ಉಳಿದ ಹಣವನ್ನು ರಾಜ್ಯಗಳ ಮೇಲೆ ಹೇರಿದೆ ಎಂದು ವಿವರಿಸಿದ್ದಾರೆ.
VB GRAMG ಒಂದು “ಖಾತರಿ” ಅಲ್ಲ. ಇದು ಸುಧಾರಣೆಯ ಹೆಸರಿನಲ್ಲಿ ವೆಚ್ಚವನ್ನು ರಾಜ್ಯಗಳ ಮೇಲೆ ವರ್ಗಾಯಿಸುವ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

