ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾ ಆನಂದ್

Throwback Photos: 5 Clicks Of Vaamanan Actress Priya Anand That Will Leave You Awestruck

ಪಂಚಬಾಷಾ ತಾರೆ ಪ್ರಿಯಾ ಆನಂದ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2009ರಲ್ಲಿ ತೆರೆ ಕಂಡ ‘ವಾಮನನ್’ ಎಂಬ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾ ಆನಂದ್ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

2010ರಲ್ಲಿ ಲೀಡರ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತೆಲುಗು ಚಿತ್ರಂಗಕ್ಕೂ ಎಂಟ್ರಿ ಕೊಟ್ಟರು. ಇವರು ಕನ್ನಡದಲ್ಲಿ ನಟಿಸಿದ ಮೊಟ್ಟ ಮೊದಲ ಸಿನಿಮಾ ‘ರಾಜಕುಮಾರ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು.

ಇತ್ತೀಚಿಗೆ ನಟಿ ಪ್ರಿಯಾ ಆನಂದ್  ಅವರ ಅಂಧಗನ್  ಶೂಟಿಂಗ್ ಪೂರ್ಣಗೊಂಡಿದ್ದು, ‘ಸುಮೋ’ ಚಿತ್ರ  ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕುಲದಲ್ಲಿ ಕೀಲ್ಯಾವುದೋ ಎಂಬ ಕನ್ನಡ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ.ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಕಲಾವಿದರು ಹಾಗೂ ಅವರ ಕುಟುಂಬದವರು ಪ್ರಿಯಾ ಆನಂದ್ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read