HomeLive Newsಸಹಾಯದ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಖಾಸಗಿ ಚಾನಲ್ ವ್ಯವಸ್ಥಾಪಕ ನಿರ್ದೇಶಕ ಅರೆಸ್ಟ್

ಸಹಾಯದ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಖಾಸಗಿ ಚಾನಲ್ ವ್ಯವಸ್ಥಾಪಕ ನಿರ್ದೇಶಕ ಅರೆಸ್ಟ್

ಬೆಂಗಳೂರು: ಪತಿಯಿಂದ ವಂಚನೆಗೊಳಗಾಗಿದ್ದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಖಾಸಗಿ ಚಾನಲ್ ವ್ಯವಸ್ಥಾಪಕ ನಿರ್ದೇಶಕನನ್ನು ಬಂಧಿಸಲಾಗಿದೆ.

ಕೊಟ್ಟ ಹಣ ವಾಪಸ್ ಕೇಳಿದಾಗ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಕರುನಾಡು ಎಂಬ ಖಾಸಗಿ ಚಾನಲ್ ಎಂಡಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸರು ಬಂಧಿಸಿದ್ದಾರೆ. ನಾಯಂಡಹಳ್ಳಿಯ ನಿವಾಸಿ ಮೊಹಮ್ಮದ್ ಹನೀಫ್(33) ಬಂಧಿತ ಆರೋಪಿ. ಬಿಟಿಎಂ ಲೇಔಟ್ ನಿವಾಸಿಯಾಗಿರುವ 43 ವರ್ಷದ ಮಹಿಳೆಯಿಂದ 16 ಲಕ್ಷ ರೂಪಾಯಿ ಪಡೆದು ವಂಚಿಸಿ, ಜಾತಿ ಬಗ್ಗೆ ಅಸಭ್ಯವಾಗಿ ನಿಂದಿಸಿದ್ದಾನೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಸಿ ಎಸ್ಟಿ ಕಾಯ್ದೆ ದಾಖಲಿಸಿದ್ದರಿಂದ ಡಿಸಿಇಆರ್‌ಎಗೆ ಪ್ರಕರಣ ವರ್ಗಾಯಿಸಲಾಗಿತ್ತು.

ಸಂತ್ರಸ್ತರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಕಾರಣದಿಂದ 2016ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಂಪತಿ ನಡೆಸುತ್ತಿದ್ದ ಶಾಲೆಯನ್ನು ಪತ್ನಿಗೆ ತಿಳಿಯದಂತೆ ಪತಿ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ಮಾಧ್ಯಮಗಳ ಮೊರೆ ಹೋಗಲು ನಿರ್ಧರಿಸಿದ ಮಹಿಳೆಗೆ ಅಶೋಕ್ ಎಂಬಾತನ ಮೂಲಕ ಹನೀಫ್ ಪರಿಚಯವಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಡಿಗೆಹಳ್ಳಿಯಲ್ಲಿರುವ ಕರುನಾಡು ಚಾನಲ್ ಕಚೇರಿಗೆ ಕರೆಸಿಕೊಂಡ ಆರೋಪಿ ನಾನು ಚಾನಲ್ ಎಂಡಿ ಜೊತೆಗೆ ಎನ್.ಜಿ.ಒ.ವೊಂದರ ಚೇರ್ಮನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ಇತ್ಯರ್ಥ ಪಡಿಸುವುದಾಗಿ ತಿಳಿಸಿದ ನಂತರ ಇಬ್ಬರೂ ಸ್ನೇಹಿತರಾಗಿದ್ದರು. ಹಣದ ಅವಶ್ಯಕತೆ ಇದೆ ಎಂದು ಹಂತ ಹಂತವಾಗಿ ಸಂತ್ರಸ್ತೆಯಿಂದ ಆರೋಪಿ 16 ಲಕ್ಷ ರೂ. ಪಡೆದುಕೊಂಡಿದ್ದ.

ಶಾಲೆಯ ಪ್ರಕರಣ ಬಗೆಹರಿಸಲು ಕೇರಳದ ಗುರುಗಳ ಬಳಿ ಪೂಜೆ ಮಾಡಿಸಬೇಕೆಂದು ಪುಸಲಾಯಿಸಿ ಕೇರಳಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಅಶ್ಲೀಲವಾಗಿ ವರ್ತಿಸಿದ್ದಾನೆ. ನಾಯಂಡಹಳ್ಳಿ ಕಚೇರಿಯಲ್ಲಿಯೂ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಮದುವೆ ಮಾಡಿಕೋ ಎಂದು ಪೀಡಿಸಿದ್ದಾನೆ. ನಿರಾಕರಿಸಿದಾಗ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular