HomeKarnatakaಜೈಲಿನಲ್ಲಿಯೇ ಕೈದಿಗಳ ಮಾರಾಮಾರಿ; ಸ್ಕ್ರೂಡ್ರೈವರ್ ನಿಂದ ಕೊಲೆಗೆ ಯತ್ನ

ಜೈಲಿನಲ್ಲಿಯೇ ಕೈದಿಗಳ ಮಾರಾಮಾರಿ; ಸ್ಕ್ರೂಡ್ರೈವರ್ ನಿಂದ ಕೊಲೆಗೆ ಯತ್ನ

ಬೆಳಗಾವಿ: ಕೈದಿಗಳ ನಡುವೆ ಜೈಲಿನಲ್ಲಿಯೇ ಮಾರಾಮಾರಿ ನಡೆದಿದ್ದು, ಕೊಲೆಯತ್ನ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.

ಇಬ್ಬರು ಕೈದಿಗಳ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿದ್ದು, ಓರ್ವ ಕೈದಿ ಮತ್ತೋರ್ವ ಕೈದಿಗೆ ಸ್ಕ್ರೂಡ್ರೈವರ್ ನಿಂದ ಇರಿದಿದ್ದಾನೆ. ಸುಮಾರು 5 ಬಾರಿ ಇರಿದು ಆತನನ್ನು ಕೊಲ್ಲಲು ಯತ್ನಿಸಿದ್ದಾನೆ. ಹಿಂಡಲಗಾ ಜೈಲಿನಲ್ಲಿ ನಡೆದಿರುವ ಈ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯ ಮೂಲದ ಸಾಯಿಕುಮಾರ್ ಎಂಬ ವಿಚಾರಣಾಧೀನ ಕೈದಿ ಮೇಲೆ, ಅದಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಶಂಕರ ಭಜಂತ್ರಿ ಎಂಬುವವನು ಹಲ್ಲೆ ನಡೆಸಿದ್ದು, ಸ್ಕ್ರೂಡ್ರೈವರ್ ನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಸಾಯಿಕುಮಾರ್ ಹೊಟ್ಟೆ, ಕಿವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆತನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಜೈಲಿನಲ್ಲಿ ನಡೆದಿರುವ ಈ ಘಟನೆ ಮುಚ್ಚಿ ಹಾಕಲು ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular